ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 39.5 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಸುಮಾರು 1.33 ನಿಮಷಗಳ ಕಾಲ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್ ಅವರು ಹಲವಾರು ಘೋಷಣೆಗಳನ್ನು ಮಾಡಿದರು. ಇದೇ ವೇಳೆ ಜನರ ಅನುಕೂಲಕ್ಕಾಗಿ ಇ- ಪಾಸ್ ಪೋರ್ಟ್ ಗಳನ್ನು ವಿತರಿಸುವುದಾಗಿ ಘೋಷಣೆ ಮಾಡಿದರು.
ಪಾಸ್ ಪೋರ್ಟ್ ಜಾಕೆಟ್ ನಲ್ಲಿ ಎನ್‌ಕೋಡ್ ಮಾಡಲಾದ ಪ್ರಮುಖ ಭದ್ರತಾ ಮಾಹಿತಿಯೊಂದಿಗೆ ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಚಿಪ್ ಹೊಂದಿರುವ ಇ ಪಾಸ್ ಪೋರ್ಟನ್ನು ನಾಗರಿಕರಿಗೆ ನೀಡಲಾಗುತ್ತದೆ. ಅರ್ಜಿದಾರನ ವೈಯಕ್ತಿಕ ಮಾಹಿತಿಗಳನ್ನು ಡಿಜಿಟಲ್ ಸಹಿಯೊಂದಿಗೆ ಚಿಪ್ ನಲ್ಲಿರುತ್ತದೆ. ಈ ಚಿಪ್ ನ್ನು ಪಾಸ್ ಪೋರ್ಟ್ ಜಾಕೆಟ್ ನಲ್ಲಿ ಅಳವಡಿಸಲಾಗುತ್ತದೆ. ಒಂದು ವೇಳೆ ಚಿಪ್ ಅನ್ನು ಹಾಳುಮಾಡಿದರೆ, ಸಿಸ್ಟಮ್ ಮೂಲಕ ಅದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಪಾಸ್ ಪೋರ್ಟ್ ದೃಢೀಕರಣವು ವಿಫಲಗೊಳ್ಳುತ್ತದೆ.
ಇದನ್ನೂ ಓದಿ:ಜನಪ್ರಿಯ ಘೋಷಣೆಗಳಿಲ್ಲದ ಕೇಂದ್ರ ಬಜೆಟ್ 2022: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ?
ನಾಸಿಕ್ ಮೂಲದ ಇಂಡಿಯಾ ಸೆಕ್ಯುರಿಟಿ ಪ್ರೆಸ್ ನಲ್ಲಿ ಪಾಸ್ ಪೋರ್ಟ್ ಜಾಕೆಟ್ ಗಳಿಗೆ ಎಲೆಕ್ಟ್ರಾನಿಕ್ ಚಿಪ್ ಉತ್ಪಾದನೆಗೆ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿದೆ. ಖರೀದಿ ಪ್ರಕ್ರಿಯೆ ಮುಗಿದ ನಂತರ ಪಾಸ್‌ಪೋರ್ಟ್‌ಗಳ ವಿತರಣೆ ಪ್ರಾರಂಭವಾಗುತ್ತದೆ.
ಡಿಜಿಟಲ್ ಶಿಕ್ಷಣ ಕ್ರಾಂತಿ: ‘ಒನ್ ಕ್ಲಾಸ್- ಒನ್ ಟಿವಿ ಚಾನೆಲ್’ ಪಿಎಂ ಇ-ವಿದ್ಯಾ ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್ ಗಳಿಗೆ ವಿಸ್ತರಿಸಲಾಗುವುದು. ಇದು ಕೋವಿಡ್ ನಿಂದಾಗಿ ಔಪಚಾರಿಕ ಶಿಕ್ಷಣದ ನಷ್ಟವನ್ನು ಸರಿದೂಗಿಸಲು 1 ರಿಂದ 12 ನೇ ತರಗತಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣವನ್ನು ಒದಗಿಸಲು ಎಲ್ಲಾ ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ” ಎಂದು ವಿತ್ತ ಸಚಿವೆ ಘೋಷಿಸಿದರು.
ಇದನ್ನೂ ಓದಿ:ಕೇಂದ್ರ ಬಜೆಟ್ 2022-23: ಈ ಬಾರಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?
ಮಾನಸಿಕ ಆರೋಗ್ಯ: ಮಾನಸಿಕ ಆರೋಗ್ಯ ಸಮಾಲೋಚನೆಗಾಗಿ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಈ ಕಾರ್ಯಕ್ರಮಕ್ಕೆ ಐಐಟಿ ಬೆಂಗಳೂರು ತಾಂತ್ರಿಕ ಬೆಂಬಲವನ್ನು ನೀಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
ಇದನ್ನೂ ಓದಿ:ದೇಶದ ಐದು ನದಿ ಜೋಡಣೆಗೆ ಬಜೆಟ್ ನಲ್ಲಿ ಅಸ್ತು: 44,605 ಕೋಟಿ ರೂ ಅನುದಾನ