Advertisement

ತಪು ಸರಿಪಡಿಸಲು ಅವಕಾಶ; ಕೇಂದ್ರ ಸರಕಾರದ ಮಹತ್ವದ ಘೋಷಣೆ

12:25 AM Feb 02, 2022 | Team Udayavani |

ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಆದೀತು ಎಂದು ನಿರೀಕ್ಷೆ ಮಾಡಿದ್ದ ಮಧ್ಯಮ ವರ್ಗ, ಸಂಬಳದಾರರ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ವಿಶೇಷವಾದ ಅಂಶಗಳನ್ನು ಪ್ರಕಟಿಸಲಾಗಿಲ್ಲ. ಆದರೆ, ಕೆಲವೊಂದು ಪರೋಕ್ಷವಾಗಿ ಸಮಾಧಾನ ತರುವಂಥ ಅಂಶಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ.

Advertisement

ಅದರಲ್ಲಿ ಪ್ರಮುಖವಾಗಿ ಹೆಸರಿಸ ಬೇಕಾದ ಅಂಶವೆಂದರೆ, ಹಿಂದಿನ ವಿತ್ತೀಯ ವರ್ಷಗಳಲ್ಲಿ ಸಲ್ಲಿಕೆ ಮಾಡ ಲಾ ಗಿರುವ ರಿಟರ್ನ್ಸ್ ಪ್ರಕ್ರಿಯೆಯಲ್ಲಿ ತಪ್ಪುಗಳು ಉಂಟಾಗಿದ್ದಲ್ಲಿ ಅದನ್ನು ಸರಿಪಡಿಸಲು ದೀರ್ಘ‌ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ. ಕೇಂದ್ರ ಸರಕಾರದ ಪರಿಷ್ಕೃರಿಸಿದ ನಿಯಮದ ಪ್ರಕಾರ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತಪ್ಪುಗಳನ್ನು ಪರಿಷ್ಕರಿಸಿ, ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಕಲ್ಪಿಸಲು ಕ್ರಮ ಜಾರಿಗೊಳಿ ಸಲಾಗುತ್ತದೆ. ಅದಕ್ಕಾಗಿ ಹೆಚ್ಚುವರಿ ಮೊತ್ತವನ್ನು ತೆರಿಗೆಯ ರೂಪದಲ್ಲಿ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಆಯಾ ವಿತ್ತೀಯ ವರ್ಷದ ರಿಟರ್ನ್ಸ್ ಸಲ್ಲಿಕೆಯ ವರ್ಷ ಮುಕ್ತಾಯದಿಂದ ಎರಡು ವರ್ಷಗಳ ಒಳಗಾಗಿ ಅಪ್‌ ಡೇಟೆ ಡ್‌ ರಿಟರ್ನ್ಸ್ (ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ) ಅನ್ನು ಸಲ್ಲಿಸಬೇಕು.

ನಂಬಿಕೆ ಸ್ಥಾಪಿಸಲು ಯತ್ನ
ತೆರಿಗೆ ಪಾವತಿ ಮಾಡುವವರು ರಿಟರ್ನ್ಸ್ ಸಲ್ಲಿಕೆ ವೇಳೆ ಕೆಲವೊಂದು ಅಂಶಗಳು ತಪ್ಪಿ ಹೋಗಿರುತ್ತವೆ. ಈ ಹಂತದಲ್ಲಿ ತೆರಿಗೆ ಪಾವತಿ ದಾರರಿಗೆ ತಪ್ಪು ತಿದ್ದಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದರಿಂದ ತೆರಿಗೆದಾರರು ಮತ್ತು ಇಲಾಖೆ ನಡುವಿನ ನಂಬಿಕೆ ಮತ್ತು ಬಾಂಧವ್ಯ ವೃದ್ಧಿಗೊಳಿಸಲು ಪರಿಷ್ಕರಿಸಿದ ರಿಟರ್ನ್ಸ್ ಸಲ್ಲಿಸುವ ವ್ಯವಸ್ಥೆ ಜಾರಿಗೊ ಳಿಸುವುದರಿಂದ ಹೊಸ ಭಾಷ್ಯ ಬರೆದಂತಾಗುತ್ತದೆ ಎನ್ನುವುದು ಸರಕಾರದ ಪ್ರತಿಪಾದನೆ.

ಶೇ.12ರಿಂದ ಶೇ.7
ಕಾರ್ಪೋರೆಟ್‌ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡಲು ಸರ್ಚಾರ್ಜ್‌ ಪ್ರಮಾಣವನ್ನು ಶೇ.12ರಿಂದ ಶೇ.7ಕ್ಕೆ ಇಳಿಕೆ ಮಾಡಲಾಗಿದೆ.

ಅಂಗವಿಕಲರಿಗೆ ತೆರಿಗೆ ವಿನಾಯಿತಿ

ಅಂಗವಿಕಲ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ ಅಂಶವನ್ನು ಸರಕಾರ ಪ್ರಕಟಿಸಿದೆ. ಸದ್ಯ ಇರುವ ನಿಯಮ ಪ್ರಕಾರ ಅಂಗವಿಕಲ ವ್ಯಕ್ತಿಯ ತಂದೆ ಏಕಕಂತಿನಲ್ಲಿ ಮೊತ್ತವನ್ನು ಪಾವತಿ ಮಾಡಿರಬೇಕು. ಅತ್ಯಂತ ಕಠಿನ ಸಂದರ್ಭದಲ್ಲಿ ಅಂಗವಿಕಲ ವ್ಯಕ್ತಿಯ ತಂದೆ ನಿಧನ ಹೊಂದಿದ ಬಳಿಕ ಆ ಮೊತ್ತ ಸಿಗುತ್ತಿತ್ತು. ಕೇಂದ್ರ ಸರಕಾರದ ಹೊಸ ಪ್ರಸ್ತಾವನೆಯ ಪ್ರಕಾರ ಅಂಗವಿಕಲ ವ್ಯಕ್ತಿಗಳ ಹೆತ್ತವರು ಅಥವಾ ಪೋಷಕರ ಜೀವಿತಾವಧಿಯಲ್ಲಿಯೇ ಆ ಮೊತ್ತವನ್ನು ವಾರಸುದಾರರಿಗೆ ಪಾವತಿ ಮಾಡುವ ಪ್ರಸ್ತಾವ ಇದೆ.

ಸ್ಟಾರ್ಟಪ್‌ ತೆರಿಗೆ ವಿನಾಯಿತಿ
ಇತ್ತೀಚಿನ ವರ್ಷಗಳಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಸ್ಟಾರ್ಟ್‌ಅಪ್‌ ಕೊಡುಗೆ ಅಪಾರ. ಅವುಗಳ ಕೊಡುಗೆ ಮನ್ನಿಸಿ ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿ ವ್ಯವಸ್ಥೆ ಯನ್ನು ಇನ್ನೂ ಒಂದು ವರ್ಷ ಕಾಲ ವಿಸ್ತರಿಸಲಾಗಿದೆ. ಕೇಂದ್ರದ ಈ ಕ್ರಮ ದಿಂದ ಮೂರು ವರ್ಷಗಳ ಬದಲಾಗಿ ನಾಲ್ಕು ವರ್ಷಗಳ ಕಾಲ ತೆರಿಗೆ ವಿನಾಯಿತಿ ಲಭಿಸಲಿದೆ. ಕೊರೊನಾ ಸೋಂಕಿನಿಂದಾಗಿ ದೇಶದ ಅರ್ಥ ವ್ಯವಸ್ಥೆಗೆ ಉಂಟಾದ ಪ್ರತಿಕೂಲ ಪರಿಣಾಮದಿಂದ ಉದ್ದಿಮೆಗೆ ಹೆಚ್ಚಿನ ರಕ್ಷಣೆ ಮತ್ತು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2022 ಮಾ.31ರ ಒಳಗಾಗಿ ಸ್ಥಾಪನೆಯಾದ ಸ್ಟಾರ್ಟ್‌ಅಪ್‌ ಮೂರು ವರ್ಷ ಗಳಿಂದ ಕೇಂದ್ರ ಸರಕಾರ ತೆರಿಗೆ ವಿನಾಯಿತಿ ನೀಡುತ್ತಾ ಬಂದಿದೆ.

Advertisement

ವಿದೇಶಗಳಿಂದ ಪಾಲಿಷ್‌ ವಜ್ರ ತರಲು ಅವಕಾಶ
ವಿದೇಶಗಳಲ್ಲಿನ ನಿಮ್ಮ ಬಂಧುಗಳು ಅಥವಾ ಮಿತ್ರರು ಇನ್ನು ಮುಂದೆ ಹರಳು, ಪಾಲಿಶ್‌ ಮಾಡಿದ ವಜ್ರಗಳನ್ನು ತರುವುದಿದ್ದರೆ ಸಮಸ್ಯೆ ಇಲ್ಲ. ಏಕೆಂದರೆ, ಕೇಂದ್ರದ ಹೊಸ ನೀತಿಯ ಪ್ರಕಾರ ಅವುಗಳಿಗೆ ಶೇ.5 ಆಮದು ಸುಂಕ ಇಳಿಕೆ ಮಾಡಲಾಗುತ್ತದೆ. ಕತ್ತರಿಸಿದ ಮತ್ತು ಪಾಲಿಷ್‌ ಮಾಡಿದ ವಜ್ರಗಳು, ಹರಳುಗಳಿಗೆ ಈ ನಿಯಮ ಅನ್ವಯ. ಸದ್ಯ ಕತ್ತರಿಸಿದ ಮತ್ತು ಪಾಲಿಶ್‌ ಮಾಡಿದ ವಜ್ರಗಳು, ಪಚ್ಚೆ-ಹರಳುಗಳಿಗೆ ಶೇ.7.5 ಆಮದು ಸುಂಕ ವಿಧಿಸಲಾಗುತ್ತದೆ. ಚಿನ್ನಾಭರಣ ಮತ್ತು ವಜ್ರೋದ್ಯಮಕ್ಕೆ ಅನುಕೂಲವಾಗುವಂತೆ ಇ-ಕಾಮರ್ಸ್‌ ವೇದಿಕೆಯ ಮೂಲಕ ದೇಶದಲ್ಲಿ ಉತ್ಪಾದಿಸಲಾಗುವ ಚಿನ್ನಾಭರಣ ಮತ್ತು ವಜ್ರಗಳ ಉತ್ಪನ್ನಗಳನ್ನು ರಫ್ತು ಮಾಡುವ ವಿಷಯಗಳಿಗೂ ಜೂನ್‌ನಿಂದ ಅನ್ವಯವಾಗುವಂತೆ ಸರಳೀಕೃತ ಹೊಸ ರೀತಿಯ ನಿಯಮ ಗಳನ್ನು ಜಾರಿಗೊಳಿಸುವ ಬಗ್ಗೆ 2022-23ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ವಿದೇಶಗಳಿಂದ ಮೌಲ್ಯ ತಗ್ಗಿಸಿದ ಕೃತಕ ಆಭರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡದಂತೆ ಕ್ರಮ ಕೈಗೊಳ್ಳಲು ಪ್ರತಿ ಕೆಜಿಗೆ 400 ರೂ. ಶುಲ್ಕ ವಿಧಿಸಲೂ ಪ್ರಸ್ತಾವಿಸಲಾಗಿದೆ.

ಸಹಕಾರ ಕ್ಷೇತ್ರಕ್ಕೆ ಸಂಭ್ರಮ
ಸಹಕಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ದಿಂದ ಸಂತೋಷದ ವಿಚಾರ ಪ್ರಕಟಗೊಂಡಿದೆ. ಬದಲೀ ಕನಿಷ್ಠ ತೆರಿಗೆ (ಎಎಂಟಿ) ಪ್ರಮಾಣ ಹಾಲಿ ಶೇ.18.5ರಿಂದ ಶೇ.15ಕ್ಕೆ ಇಳಿಕೆ ಮಾಡುವ ಪ್ರಸ್ತಾವ ಮಾಡಲಾಗಿದೆ. ಜತೆಗೆ ಸರ್ಚಾರ್ಜ್‌ ಪ್ರಮಾಣ ವನ್ನು ಶೇ.12ರಿಂದ ಶೇ.7ಕ್ಕೆ ಇಳಿಕೆ ಮಾಡುವ ಇರಾದೆ ಯನ್ನು ಕೇಂದ್ರ ಹೊಂದಿದೆ. 1 ಕೋಟಿ ರೂ.ಗಳಿಂದ 10 ಕೋಟಿ ರೂ. ವರೆಗೆ ಆದಾಯ ಇರುವ ಸಹಕಾರ ಸಂಘಗಳಿಗೆ ಈ ಪ್ರಸ್ತಾವ ಅನ್ವಯವಾಗ ಲಿದೆ. ಖಾಸಗಿ ಕಂಪೆನಿಗಳಿಗೆ ಪ್ರತಿಸ್ಪರ್ಧಿಯಾಗಿ ಸಹಕಾರ ಸಂಘಗಳು ಬೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ನೆರವಾಗಲಿದೆ. ಇದರಿಂದ ಗ್ರಾಮೀಣ ಮತ್ತು ರೈತರು ಹಾಗೂ ಕೃಷಿಯನ್ನು ಜೀವನಾಧಾರವಾಗಿ ನಂಬಿರುವ ಸಮುದಾಯಕ್ಕೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ ಮತ್ತು ಸಹಕಾರ ಸಂಘಗಳ ಆದಾಯ ಹೆಚ್ಚಿಸಲು ನೆರವಾಗಲಿದೆ.

ನೇರ ತೆರಿಗೆ ಪ್ರಮಾಣ ಹೆಚ್ಚಳ
ಬರೋಬ್ಬರಿ 3 ವಿತ್ತೀಯ ವರ್ಷಗಳ ಬಳಿಕ ನೇರ ತೆರಿಗೆ ಸಂಗ್ರಹ ದಲ್ಲಿ ಬಜೆಟ್‌ ನಿರೀಕ್ಷೆ ಮೀರಿಸಿದೆ. 11.08 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಹಾಲಿ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಪರಿಷ್ಕರಿಸಲಾಗಿರುವ ಅಂದಾಜಿನಲ್ಲಿ 12.50 ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹಿಸಲಾಗಿದೆ. ಅದರಲ್ಲಿ ಕಾರ್ಪೋರೆಟ್‌ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಯೂ ಸೇರಿದೆ. ಪರಿಷ್ಕೃತ ಅಂದಾಜಿನ ಪ್ರಕಾರ ಕೇಂದ್ರ ಸರಕಾರಕ್ಕೆ 6.35 ಲಕ್ಷ ಕೋಟಿ ರೂ. ಕಾರ್ಪೋರೆಟ್‌ ತೆರಿಗೆಯಿಂದಲೇ ಬರಲಿದೆ. 6.15 ಲಕ್ಷ ಕೋಟಿ ರೂ. ವೈಯಕ್ತಿಕ ಆದಾಯ ತೆರಿಗೆಯಿಂದಲೇ ಜಮೆಯಾಗುವ ಸಾಧ್ಯತೆಯಿದೆ. 2017-18ನೇ ಸಾಲಿನಲ್ಲಿ 9.9 ಲಕ್ಷ ಕೋಟಿ ರೂ. ನೇರ ತೆರಿಗೆಯಿಂದ ಸಂಗ್ರಹಿಸಲು ಉದ್ದೇಶಿಸಿತ್ತು. ಅಂತಿಮವಾಗಿ 10.05 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.

ವಿತ್ತೀಯ ಕೊರತೆ ಶೇ.6.9
ಪ್ರಸಕ್ತ ವಿತ್ತೀಯ ವರ್ಷದಲ್ಲಿ ದೇಶದ ವಿತ್ತೀಯ ಕೊರತೆ ಪ್ರಮಾಣ ಶೇ.6.9 ಆಗಲಿದೆ. ಕಳೆದ ವರ್ಷ ನಿರೀಕ್ಷಿಸಿದ ಪ್ರಕಾರ ಶೇ.6.8 ರಷ್ಟು ವಿತ್ತೀಯ ಕೊರತೆ ಉಂಟಾಗಬಹುದು ಎನ್ನಲಾಗಿತ್ತು. ಅದನ್ನು ನಿವಾರಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ. 2022-23ನೇ ಸಾಲಿನಲ್ಲಿ ಶೇ.6.4 ವಿತ್ತೀಯ ಕೊರತೆ ಉಂಟಾಗಲಿದೆ ಎಂದು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next