Advertisement
ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯನ್ನು “ಆತ್ಮನಿರ್ಭರ’ದ ಅಡಿ ಯಲ್ಲೇ ನಿರ್ಮಿಸಲು ಕೇಂದ್ರ ಪಣತೊಟ್ಟಿದೆ. ನಗರ ಪ್ರದೇಶಗಳಲ್ಲಿ ಬ್ಯಾಟರಿ ವ್ಯವಸ್ಥೆಯುಳ್ಳ ಚಾರ್ಜಿಂಗ್ ಸ್ಟೇಶನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ಈ ಪಾಲಿಸಿ ಉತ್ತೇಜಿಸಲಿದೆ. ಯಾವುದೇ ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿಯ ಕಾರಣಕ್ಕೇ ದುಬಾರಿ ಎನ್ನಿಸಿಕೊಳ್ಳುತ್ತವೆ. ಇದನ್ನು ತಗ್ಗಿಸಲು ಚಾರ್ಜಿಂಗ್ ಸ್ಟೇಶನ್‌ಗಳಲ್ಲಿ ಬ್ಯಾಟರಿ ವ್ಯವಸ್ಥೆ ಅಗತ್ಯವಾಗಿ ನೆರವಾಗಲಿದೆ ಎಂಬುದು ಕೇಂದ್ರದ ಲೆಕ್ಕಾಚಾರ. ಎಲೆಕ್ಟ್ರಿಕ್ ವೆಹಿಕಲ್‌ಗಳ ಉತ್ಪಾದನೆ ಹೆಚ್ಚಳವಲ್ಲದೆ, ಈ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‌ಗ್ಳಿಗೂ ಈ ಪಾಲಿಸಿ ವರದಾನವಾಗುವ ಸಾಧ್ಯತೆ ಇದೆ.
ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ಮತ್ತು ಉತ್ತೇಜನಕ್ಕೆ ಸಂಬಂಧಿಸಿದಂತೆ ಕೇಂದ್ರ ಈ ಬಾರಿ ಬರೋಬ್ಬರಿ 2,908 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಹಿಂದೆಂದಿಗಿಂತಲೂ ಅಧಿಕ. ಈ ಹಿಂದಿನ ಮೂರು ವರ್ಷಗಳ ಬಜೆಟ್‌ನಲ್ಲಿ ಕ್ರಮವಾಗಿ 318 ಕೋಟಿ ರೂ., 757 ಕೋಟಿ ರೂ., 800 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು.
Related Articles
ಉದ್ಯಮಗಳ ಅಗತ್ಯಕ್ಕೆ ಪೂರಕವಾಗಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಮುಂದಡಿ ಇಟ್ಟಿದೆ. ಈಗಾಗಲೇ ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ “ರಾಷ್ಟ್ರೀಯ ಕೌಶಲ ಅರ್ಹತಾ ಕಾರ್ಯಕ್ರಮ’ ಜಾರಿಯಲ್ಲಿದೆ. ಈ ಕಾರ್ಯಕ್ರಮದಡಿ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು, ಅವರ ಅಗತ್ಯಕ್ಕೆ ತಕ್ಕಂಥ ಪ್ರತಿಭೆಗಳನ್ನು ಸೃಷ್ಟಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಇದರಿಂದ ಉದ್ಯೋಗ ಕೇಂದ್ರಿತ ತರಬೇತಿಗಳಿಗಷ್ಟೇ ಮಾನ್ಯತೆ ಸಿಗಲಿದೆ.
Advertisement
ಮತ್ತಷ್ಟು ಮನೆಗಳಿಗೆ ನಲ್ಲಿ ನೀರುಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ “ಹರ್ ಘರ್, ನಲ್ ಸೆ ಜಲ್’ ಯೋಜನೆ ಜಾರಿಗೊಂಡಿದೆ. ಈ 2 ವರ್ಷಗಳಲ್ಲಿ ದೇಶಾದ್ಯಂತ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ ಕಲ್ಪಿಸಲಾಗಿದೆ. ಪ್ರಸ್ತುತ ಈ ಯೋಜನೆಗೆ 60 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಎತ್ತಿಟ್ಟಿದ್ದು, 2022-23ರಲ್ಲಿ ಒಟ್ಟು 3.8 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸಲು ಸರಕಾರ ಮುಂದಾಗಿದೆ. “ವಿಸ್ತಾ’ಗೆ ಹೆಚ್ಚುವರಿ ಅನುದಾನ
ಕೇಂದ್ರ ವಿಸ್ತಾ ಯೋಜನೆಯಡಿ ನೂತನ ಸಂಸತ್, ನೂತನ ಪ್ರಧಾನಮಂತ್ರಿ ಕಚೇರಿ ಸೇರಿದಂತೆ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೊಂಡಿರುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ 2,600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಮೊತ್ತ 767 ಕೋಟಿ ರೂ. ಅಧಿಕ. ರಾಜಧಾನಿ ದಿಲ್ಲಿ ಸೇರಿದಂತೆ ವಿವಿಧೆಡೆಯ ಕೇಂದ್ರ ಸರಕಾರ ಸ್ವಾಮ್ಯದ ವಸತಿಯೇತರ ಕಟ್ಟಡ ಕಾಮಗಾರಿಗಳಿಗೆ ಈ ಹಣ ವಿನಿಯೋಗವಾಲಿದೆ. ರಕ್ಷಣರಂಗದ ಆವಿಷ್ಕಾರಕ್ಕೆ ಮತ್ತಷ್ಟು ಉತ್ತೇಜನ
ಚೀನ, ಪಾಕಿಸ್ಥಾನದಂಥ ಬದ್ಧವೈರಿಗಳನ್ನು ಅಕ್ಕಪಕ್ಕದಲ್ಲೇ ಇಟ್ಟು ಕೊಂಡಿರುವ ಭಾರತ, ರಕ್ಷಣ ಬಜೆಟ್ ಅನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಪ್ರತೀ ವರ್ಷ ರಕ್ಷಣಾ ಕ್ಷೇತ್ರದ ಬಜೆಟ್ ಹಿಗ್ಗುತ್ತಲೇ ಇದ್ದು, ಈ ಬಾರಿ ಅದು ಶೇ.10ರಷ್ಟು ಹಿಗ್ಗಿದೆ. 2021-22ರಲ್ಲಿ 4.78 ಲಕ್ಷ ಕೋಟಿ ರೂ.ಗಳನ್ನು ರಕ್ಷಣ ರಂಗಕ್ಕೆ ಸರಕಾರ ಮೀಸಲಿಟ್ಟಿತ್ತು. ಈ ಬಾರಿ 5.25 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಭದ್ರತಾ ವಿಭಾಗಕ್ಕೆ ಹೆಚ್ಚು ಒತ್ತುಕೊಟ್ಟಿದೆ. ರಕ್ಷಣರಂಗವನ್ನು ಸಂಪೂರ್ಣ ಸ್ವಾವಲಂಬಿ ಯಾಗಿಸುವ ಮಂತ್ರವನ್ನು ಕೇಂದ್ರ ಪುನರುತ್ಛರಿಸಿದೆ. ಆಮದು ಪ್ರಮಾಣ ತಗ್ಗಿಸಿ, ಸ್ವದೇಶದಲ್ಲೇ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ತನ್ನ ಹಿಂದಿನ ನಿರ್ಧಾರಕ್ಕೆ ಮತ್ತೆ ಬದ್ಧವಾಗಿದೆ. ಇದಕ್ಕಾಗಿ ಪ್ರಾದೇಶಿಕ ಉದ್ಯಮಗಳಿಗೆ ರತ್ನಗಂಬಳಿ ಹಾಸಲು ಯೋಜನೆಗಳನ್ನು ಕೈಗೊಂಡಿದೆ. ರಕ್ಷಣರಂಗಕ್ಕೆ ಅಗತ್ಯವಿರುವ ಉಪಕರಣಗಳ ಆವಿಷ್ಕಾರಕ್ಕೆ, ಶಸ್ತ್ರಾಸ್ತ್ರಗಳ ಸುಧಾರಣೆಗಾಗಿ ಶೇ.25ರಷ್ಟು ಹಣವನ್ನು ಮೀಸಲಿರಿಸಿದೆ. ಎಸ್‌ಪಿವಿ ಮಾದರಿ ಆವಿಷ್ಕಾರಕ್ಕೆ ಒತ್ತು
ಡಿಆರ್‌ಡಿಒ ಜತೆಗೂಡಿ ಮಿಲಿಟರಿ ಉಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ ಕೈಗೊಳ್ಳಲು ಖಾಸಗಿ ಉದ್ಯಮಗಳಿಗೆ ಉತ್ತೇಜನ ನೀಡಿದೆ. ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ಮಾದರಿ ಅಡಿಯಲ್ಲಿ ಖಾಸಗಿ ಉದ್ಯಮಗಳು ಇದನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿದೆ. ಯಾವ ಪಡೆಗೆ ಎಷ್ಟು?
ಪ್ರಸ್ತುತ ಬಜೆಟ್‌ನಲ್ಲಿ ವಾಯುಪಡೆಯ ಆಧುನೀಕರಣಕ್ಕಾಗಿ 56,851 ಕೋಟಿ ರೂ., ನೌಕಾಪಡೆಯ ಅಭಿವೃದ್ಧಿಗೆ 47,590 ಕೋಟಿ ರೂ. ಹಾಗೂ ಭೂಸೇನೆಯ ಸುಧಾರಣೆಗೆ 32,102 ಕೋಟಿ ರೂ. ಮೀಸಲಿಟ್ಟಿದೆ.