ನವದೆಹಲಿ: ಕೋವಿಡ್ ಸಂಕಷ್ಟ ಕಾಲದ ನಡುವೆ ಕೇಂದ್ರ ಸರ್ಕಾರ ಸೋಮವಾರ(ಫೆ.1, 2021) ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ನಾರಾಯಣ ಗಾಣಿಗ ವಂಡ್ಸೆ ನಿಧನ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಮಂಡಿಸಿದ ಬಜೆಟ್ ನಲ್ಲಿ, ಕೇಂದ್ರ ಸರ್ಕಾರ 64,180 ಕೋಟಿ ರೂಪಾಯಿಯ “ಆತ್ಮನಿರ್ಭರ್ ಆರೋಗ್ಯ ಯೋಜನೆ”ಯನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ 70 ಸಾವಿರ ಹಾಗೂ ನಗರದ 11 ಸಾವಿರ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲಾಗುವುದು. 600 ಜಿಲ್ಲೆಗಳಲ್ಲಿ 602 ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್ಸ್ ಗಳ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
15 ತುರ್ತು ಆರೋಗ್ಯ ಕೇಂದ್ರಗಳ ಸ್ಥಾಪನೆ, ನಾಲ್ಕು ರಾಷ್ಟ್ರೀಯ ವೈರಾಜಲಿ ಇನ್ಸ್ ಟಿಟ್ಯೂಟ್ ಸ್ಥಾಪನೆ. 9 ಬಯೋ ಸುರಕ್ಷಾ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಈ ವರ್ಷ ಕೋವಿಡ್ 19 ಲಸಿಕೆಗಾಗಿ 35 ಸಾವಿರ ಕೋಟಿ ವಿನಿಯೋಗಿಸಲಾಗಿದೆ. ಒಂದು ವೇಳೆ ಅಗತ್ಯಬಿದ್ದರೆ ಈ ಮೊತ್ತವನ್ನು ಹೆಚ್ಚಳ ಮಾಡಲಾಗುವುದು. ಕೋವಿಡ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಒಟ್ಟು 27.1 ಲಕ್ಷ ಕೋಟಿ ರೂಪಾಯಿಯ ಆತ್ಮನಿರ್ಭರ್ ಪ್ಯಾಕೇಜ್ ಅನ್ನು ಘೋಷಿಸಿದೆ.