Advertisement
ಬಜೆಟ್‌ನಲ್ಲಿ “ಖೇಲೋ ಇಂಡಿಯಾ’ಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಇಲ್ಲಿ ಕಳೆದ ಸಲಕ್ಕಿಂತ 291.42 ಕೋ.ರೂ. ಹೆಚ್ಚಳ ಮಾಡಲಾಗಿದೆ. “ಖೇಲೋ ಇಂಡಿಯಾ’ ದೇಶದ ಯುವ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವ ಕೇಂದ್ರ ಸರಕಾರದ ಕಾರ್ಯಕ್ರಮವಾಗಿದೆ. ಮುಂದೆ ಇಲ್ಲಿನ ಸಾಧಕರು ಒಲಿಂಪಿಕ್ಸ್ ಮಟ್ಟದ ತನಕ ಗುರುತಿಸಲ್ಪಡುತ್ತಾರೆ. ಆದರೆ ಒಲಿಂಪಿಕ್ಸ್ ಹಾಗೂ ಇನ್ನಿತರ ಅಂತಾರಾಷ್ಟ್ರೀಯ ಮಟ್ಟದ ಸಾಧಕರಿಗೆ ನೀಡಲಾಗುವ ಪ್ರೋತ್ಸಾಹಧನದಲ್ಲಿ ಇಳಿಕೆಯಾಗಿದೆ. ಇದು 111 ಕೋ.ರೂ.ನಿಂದ 70 ಕೋ.ರೂ.ಗೆ ಕುಸಿದಿದೆ.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ (ಸಾಯ್) ನೀಡಲಾಗುವ ಪ್ರೋತ್ಸಾಹಧನಕ್ಕೂ ಕತ್ತರಿ ಪ್ರಯೋಗವಾಗಿದೆ. ಇಲ್ಲಿನ ಮೊತ್ತ 615 ಕೋ.ರೂ.ನಿಂದ 500 ಕೋ.ರೂ.ಗೆ ಇಳಿದಿದೆ. ಭಾರತದ ಕ್ರೀಡಾ ಬೆಳವಣಿಗೆಯಲ್ಲಿ “ಸಾಯ್’ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಭಾನ್ವಿತ ಕ್ರೀಡಾಪಟುಗಳು ರೂಪುಗೊಳ್ಳುವ ಕೇಂದ್ರ ಇದಾಗಿದೆ. ಅವರಿಗೆ ತರಬೇತಿ ನೀಡುವ ಜತೆಗೆ ಮೂಲ ಸೌಕರ್ಯ ಹಾಗೂ ಕ್ರೀಡಾ ಪರಿಕರಗಳನ್ನು ಒದಗಿಸುವುದು, ರಾಷ್ಟ್ರೀಯ ಶಿಬಿರಗಳನ್ನು ಏರ್ಪಡಿಸುವುದು, ಪ್ರಯಾಣ ಸೌಲಭ್ಯವನ್ನು ವ್ಯವಸ್ಥೆಗೊಳಿಸುವುದೆಲ್ಲ “ಸಾಯ್ ನ ಜವಾಬ್ದಾರಿಯಾಗಿರುತ್ತದೆ. ಅನುದಾನ ಕಡಿತಗೊಂಡ ಕಾರಣ “ಸಾಯ್’ ಇನ್ನು ಒಂದು ಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
Related Articles
Advertisement