Advertisement
ಆದಾಯ ತೆರಿಗೆದಾರರಿಗೆ ನಿಟ್ಟುಸಿರುವ ಬಿಡುವ ಘೋಷಣೆಗಳನ್ನು ಮಾಡಲಾಗಿದೆ. ಕೆಲವೊಂದು ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನೂ ಮಾಡಲಾ ಗಿದೆ. ಇದರ ಜತೆಗೆ ಹಳೆಯ ಪದ್ಧತಿಯಲ್ಲಿ ತೆರಿಗೆ ಪಾವತಿ ಮತ್ತು ಹೊಸ ವಿಧಗಳನ್ನು ಅನ್ವಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಸದ್ಯ ಆದಾಯ ತೆರಿಗೆ ಕಾಯ್ದೆಯ ಅನ್ವಯ ಹೆಚ್ಚಿನ ಪ್ರಮಾಣದಲ್ಲಿ ಕಡಿತ ಮತ್ತು ತೆರಿಗೆ ವಿನಾಯಿತಿ ಪಡೆದುಕೊಳ್ಳುವವರು ಅದನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಹೊಸ ತೆರಿಗೆ ಪ್ರಸ್ತಾಪದಂತೆ 70 ತೆರಿಗೆ ವಿನಾಯಿತಿ ಮಿತಿಗಳನ್ನು ತೆಗೆದು ಹಾಕಲಾಗುತ್ತದೆ. ಜತೆಗೆ ಹೊಸ ಪದ್ಧತಿಯಲ್ಲಿ ಕಡಿಮೆ ತೆರಿಗೆ ಪ್ರಮಾಣದಲ್ಲಿದ್ದುಕೊಂಡು ಯಾವುದೇ ರೀತಿಯ ವಿನಾಯಿತಿಗಳನ್ನು ಪಡೆದುಕೊಳ್ಳದೇ ಇರುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
Related Articles
Advertisement
ವಿನಾಯಿತಿ ಹಿಂದಕ್ಕೆ: ಸದಸ್ಯ 100 ವಿಧಗಳ ತೆರಿಗೆ ವಿನಾಯಿತಿಗಳು ಮತ್ತು ಕಡಿತದ ವಿಧಗಳು ಇದ್ದು, 70ನ್ನು ಮುಂದಿನ ದಿನಗಳಲ್ಲಿ ತೆಗೆದು ಹಾಕಲಾಗುತ್ತದೆ. ಬಾಕಿ ಉಳಿದವುಗಳನ್ನು ಮುಂದಿನ ದಿನಕ್ಕನುಗುಣವಾಗಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ ಯಾವ ರೀತಿಯಲ್ಲಿ ತೆರಿಗೆದಾರ ವಿನಾಯಿತಿ ಮತ್ತು ಕ್ಲೇಮ್‌ಗಳನ್ನು ಪಡೆದುಕೊಳ್ಳುತ್ತಾನೋ ಅದರ ಅನ್ವಯ ಆತನಿಗೆ ಲಾಭಗಳು ಸಿಗಲಿವೆ. ಉದಾಹರಣೆಗೆ ಹೇಳುವುದಾದರೆ ವಾರ್ಷಿಕವಾಗಿ ವ್ಯಕ್ತಿ 15 ಲಕ್ಷ ರೂ. ಆದಾಯ ಪಡೆಯುತ್ತಿದ್ದು, ಯಾವುದೇ ರೀತಿಯ ಕಡಿತ (ಡಿಡಕ್ಷನ್) ಪಡೆಯದಿದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿ ಆತ 1.95 ಲಕ್ಷ ರೂ. ತೆರಿಗೆ ನೀಡಬೇಕಾಗುತ್ತದೆ. ಹಾಲಿ ಇರುವ ಪದ್ಧತಿಯಲ್ಲಿ ಆತ 2.73 ಲಕ್ಷ ರೂ. ನೀಡಬೇಕಾಗುತ್ತದೆ. ಇದರಿಂದಾಗಿ ಆತನಿಗೆ 78 ಸಾವಿರ ರೂ.ಗಳಷ್ಟು ಕಡಿಮೆ ತೆರಿಗೆ ಪಾವತಿ ಮಾಡಿದಂತಾಗುತ್ತದೆ.
ವಿತ್ತೀಯ ಕೊರತೆ ಏರಿಕೆವಿತ್ತೀಯ ಕೊರತೆ ಪ್ರಮಾಣವನ್ನು 2019-20ನೇ ಸಾಲಿಗಾಗಿ ವಿತ್ತೀಯ ಕೊರತೆಯನ್ನು ಶೇ.3.3ರಿಂದ ಶೇ.3.8ಕ್ಕೆ ಪರಿಷ್ಕರಿಸಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹ ಸಾಧ್ಯವಾಗದೇ ಇದ್ದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಸ್ಥಿರೀಕರಿಸುವ ಬದ್ಧತೆಗೆ ಅನುಗುಣವಾಗಿ ನಿಯಮ ಅನುಸರಿಸಲಾಗಿದೆ.