ನವದೆಹಲಿ: 2019-2020ನೇ ಸಾಲಿನ ಅಯವ್ಯಯವನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಇದೊಂದು ಜನಪರ ಹಾಗೂ ಮಧ್ಯಮ ವರ್ಗದ ಬಜೆಟ್ ಎಂದು ಕೇಂದ್ರ ಬಣ್ಣಿಸಿದೆ. ಏತನ್ಮಧ್ಯೆ ಇದು ಚುನಾವಣಾ ಬಜೆಟ್ ಎಂದು ವಿಪಕ್ಷಗಳು ಟೀಕಿಸಿವೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ನೀಡಿರುವ ಅನುದಾನದ ವಿವರ ಇಲ್ಲಿದೆ.
ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂಪಾಯಿ:
ಕೇಂದ್ರ ಸರಕಾರ ಈಗಾಗಲೇ ಒನ್ ರಾಂಕ್, ಒನ್ ಪೆನ್ಶನ್ ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದು, 2019-20ನೇ ಸಾಲಿನಲ್ಲಿ ಮೊದಲ ಬಾರಿಗೆ ರಕ್ಷಣಾ ಬಜೆಟ್ 3 ಲಕ್ಷ ಕೋಟಿಯನ್ನು ದಾಟಿದೆ.
Related Articles
ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ:
ಜಗತ್ತಿನಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿ ದಿನ 27 ಕಿಲೋ ಮೀಟರ್ ನಷ್ಟು ಹೈವೇಯನ್ನು ನಿರ್ಮಾಣ ಮಾಡುತ್ತಿದೆ. ದಶಕಗಳಿಂದ ನೆನಗುದಿಗೆ ಬಿದ್ದಿದ್ದ ದೆಹಲಿ ಸುತ್ತಮುತ್ತಲಿನ ಹೈವೇ, ಅಸ್ಸಾಂನ ಬೋಗಿ ಬಿಲ್ ರೈಲ್ವೆ ಹಾಗೂ ರಸ್ತೆಗಳ ಸೇತುವೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ 19 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ.
*ಎಸ್ ಸಿ ವರ್ಗಕ್ಕೆ 76,801 ಕೋಟಿ ಮೀಸಲು, ಎಸ್ಸಿ ವರ್ಗಕ್ಕೆ ಶೇ.35ರಷ್ಟು ಅನುದಾನ ಹೆಚ್ಚಳ
*ಎಸ್ ಟಿ ವರ್ಗಕ್ಕೆ 50,086 ಕೋಟಿ ರೂಪಾಯಿ ಮೀಸಲು
*ಮನ್ರೇಗಾ ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲು
*ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ 750 ಕೋಟಿ ರೂಪಾಯಿ ಮೀಸಲು