Advertisement

ಕ್ಷಯ ರೋಗಿಗಳಿಗೆ ಮಾಸಿಕ 500 ರೂ.

09:30 AM Feb 02, 2018 | Team Udayavani |

ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ನೆರವು ಒದಗಿಸುವ ಸಲುವಾಗಿ ಇನ್ನು ಮಾಸಿಕ 500 ರೂ. ದೊರಕಲಿದೆ. ಕ್ಷಯ ರೋಗವು ಭಾರತವನ್ನು ಕಾಡುತ್ತಿರುವ ಮಾರಕ ಸಾಂಕ್ರಾಮಿಕ ರೋಗವಾಗಿದೆ. ಪ್ರತಿ ವರ್ಷ ಬೇರೆಲ್ಲಾ ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ಷಯಕ್ಕೆ ಬಲಿಯಾಗುತ್ತಿದ್ದಾರೆ. ಅಪೌಷ್ಟಿಕತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು,  ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವ ಸಲುವಾಗಿ ಹೆಚ್ಚುವರಿ 600 ಕೋಟಿ ರೂ. ಕಾರ್ಪಸ್‌ ನಿಧಿಯನ್ನು ಕೇಂದ್ರ ಸರಕಾರ ಎತ್ತಿಡಲಿದೆ. ಈ ನಿಧಿಯನ್ನು ಕ್ಷಯ ರೋಗಿಗಳ ಚಿಕಿತ್ಸೆಯ ಅವಧಿಯಲ್ಲಿ ಮಾಸಿಕ 500 ರೂ. ನೀಡಲು ಬಳಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next