Advertisement

ಕೇಂದ್ರ ಬಜೆಟ್ : ಎನ್‌ಇಪಿಗೆ ಗುಣಾತ್ಮಕ ಟಚ್‌

12:25 AM Feb 02, 2021 | Team Udayavani |

ಕಳೆದವರ್ಷ ಕೊರೊನಾ ಇದ್ದಾಗ ರಾಷ್ಟ್ರೀಯ ಶಿಕ್ಷಣನೀತಿಯನ್ನು ಜಾರಿ ಮಾಡುವುದಾಗಿ ಕೇಂದ್ರಸರ್ಕಾರ ಘೋಷಿಸಿತ್ತು. ಇದೀಗ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇನ್ನೊಂದಷ್ಟು ಮಹತ್ವದ ಘೋಷಣೆಗಳನ್ನು ವಿತ್ತಸಚಿವೆ ನಿರ್ಮಲಾ ಸೀತಾ ರಾಮನ್‌ ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೇಶಾದ್ಯಂತ ಆಯ್ದ 15,000 ಶಾಲೆಗಳನ್ನು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲಾ ಗುತ್ತದೆ. ಇವು ಸ್ಥಳೀಯವಾಗಿ ಅದ್ಭುತವಾಗಿ ರೂಪು ತಳೆಯುತ್ತವೆ ಎಂದು ನಿರ್ಮಲಾ ತಿಳಿಸಿದ್ದಾರೆ. 100 ನೂತನ ಸೈನಿಕ ಶಾಲೆಗಳು ಆರಂಭವಾಗಲಿವೆ. ಇದಕ್ಕೆ ಸರ್ಕಾರೇತರ ಸಂಸ್ಥೆಗಳು, ಶಾಸಗಿ ಶಾಲೆಗಳು, ರಾಜ್ಯಗಳ ಸಹಕಾರ ಪಡೆಯಲಾಗುತ್ತದೆ.

Advertisement

ಉನ್ನತ ಶಿಕ್ಷಣ: ದೇಶದ ಹಲವು ನಗರಗಳಲ್ಲಿ ಗರಿಷ್ಠಪ್ರಮಾಣದಲ್ಲಿ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿವೆ. ಅಂತಹ 9 ನಗರಗಳಲ್ಲಿ ಶಿಕ್ಷಣಸಂಸ್ಥೆಗಳ ನಡುವೆ ಬಾಂಧವ್ಯ ಬೆಸೆಯಲು ಕೇಂದ್ರ ತೀರ್ಮಾನಿಸಿದೆ. ಅದಕ್ಕಾಗಿ ಹಣ ಮೀಸಲಿಡಲಾಗುತ್ತದೆ. ಹೊಸತಾಗಿ ಕೇಂದ್ರಾ ಡಳಿತ ಪ್ರದೇಶವಾಗಿ ಬದಲಾಗಿರುವ ಲಡಾಖ್‌ ಭಾಗದ ಜನರ ಆಸೆ ಈಡೇರಿದೆ. ಅಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಿಸಲು ನಿರ್ಮಲಾ ಶಿಫಾರಸು ಮಾಡಿದ್ದಾರೆ.

ಪರಿಶಿಷ್ಟರಿಗೆ ಕೊಡುಗೆ: ಪರಿಶಿಷ್ಟ ಪಂಗಡದ (ಬುಡಕಟ್ಟು) ಶಿಕ್ಷಣಕ್ಕಾಗಿ 750 ಏಕಲವ್ಯ ವಸತಿ ಶಾಲೆ ಆರಂಭಿಸುವ ಗುರಿಯಿದೆ. ಈ ಶಾಲೆಗಳ ನಿರ್ವಹಣೆ ವೆಚ್ಚವನ್ನು 20ರಿಂದ 38 ಕೋಟಿ ರೂ.ಗೇರಿಸಲು ನಿರ್ಧರಿಸಲಾಗಿದೆ. ಹಾಗೆಯೇ ಪರ್ವತ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಈ ಮೊತ್ತವನ್ನು 48 ಕೋಟಿ ರೂ.ಗೇರಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶಿಕ್ಷಣ ಕ್ಕಾಗಿ, ಮೆಟ್ರಿಕ್‌ (ಎಸ್‌ಎಸ್‌ಎಲ್‌ಸಿ) ನಂತರದ ವಿದ್ಯಾರ್ಥಿವೇತನ ನೀಡಲು ಕೇಂದ್ರದ ನೆರವನ್ನು ಹೆಚ್ಚಿಸ ಲಾಗಿದೆ. ಅದರಂತೆ ಮುಂದಿನ 6 ವರ್ಷಗಳವರೆಗೆ 35,219 ಕೋ.ರೂ.ಗಳನ್ನು ಮೀಸಲಿಡಲಾಗಿದೆ.

ಶಿಕ್ಷಕರ ಸಾಮರ್ಥ್ಯ ಹೆಚ್ಚಳ: ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರತೆ ಗುಣಮಟ್ಟ (ಎನ್‌ಪಿಎಸ್‌ಟಿ) ಯೋ ಜನೆ ಯಡಿ, ದೇಶದ 92 ಲಕ್ಷ ಶಿಕ್ಷಕರ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ ರಾಷ್ಟ್ರೀಯ ಡಿಜಿಟಲ್‌ ಶಿಕ್ಷಣ ವಿನ್ಯಾಸವನ್ನು ಜಾರಿ ಮಾಡಲಾಗುತ್ತದೆ. ಇದರ ಮೂಲಕ ಹಲವು ರೀತಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಲಾಗುತ್ತದೆ.

56 ಲಕ್ಷ ಶಿಕ್ಷಕರಿಗೆ ತರಬೇತಿ ಗುರಿ
ಕಳೆದವರ್ಷ ಕೊರೊನಾ ಇದ್ದ ಕಾರಣ ದಿಗ್ಬಂಧನವನ್ನು ಘೋಷಿಸಲಾಗಿತ್ತು. ಇದರ ಮಧ್ಯೆಯೇ 30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಡಿಜಿಟಲ್‌ ಮೂಲಕ ತರಬೇತುಗೊಳಿಸಲಾ ಗಿತ್ತು. ಇದನ್ನು 2021-22ರಲ್ಲಿ ಇನ್ನೂ ವಿಸ್ತರಿಸಲಾಗುತ್ತದೆ. ಈ ಬಾರಿ 56 ಲಕ್ಷ ಶಿಕ್ಷಕರನ್ನು ತರಬೇತುಗೊ ಳಿಸುವ ಗುರಿ ಹೊಂದಲಾಗಿದೆ. ಶಾಲಾ ಮುಖ್ಯಸ್ಥರು, ಶಿಕ್ಷಕರನ್ನು ತರಬೇತುಗೊ ಳಿಸುವ ನಿಸ್ಥಾ (NISTHA) ಇದನ್ನು ಸಾಧಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next