ಬಂಟ್ವಾಳ: ಕೇಂದ್ರದ ಶೇ. 60 ಹಾಗೂ ಮೆಸ್ಕಾಂನ ಶೇ. 40 ವೆಚ್ಚದೊಂದಿಗೆ 39.48 ಕೋ.ರೂ. ಗಳಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ 4 ಕಡೆಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳನ್ನು ಅನು ಷ್ಠಾನ ಮಾಡಲಾಗಿದ್ದು, ಬಂಟ್ವಾಳದ ಉಪ ಕೇಂದ್ರದಿಂದ ಸುಮಾರು 7 ಗ್ರಾಮಗಳ 14 ಸಾವಿರ ಗ್ರಾಹಕರಿಗೆ ಗುಣಮಟ್ಟದ, ನಿರಂತರ ವಿದ್ಯುತ್ ಪೂರೈಕೆಯಾಗಲಿದೆ ಎಂದು ರಾಜ್ಯ ಇಂಧನ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಬಂಟ್ವಾಳದ ವಿದ್ಯಾಗಿರಿ ಬಳಿಯ ಅರ್ಬಿಗುಡ್ಡೆಯಲ್ಲಿ ಮೆಸ್ಕಾಂನಿಂದ ಐಪಿಡಿಎಸ್ ಯೋಜನೆ ಮೂಲಕ ಅನುಷ್ಠಾನ ಗೊಂಡಿರುವ ಸುಮಾರು 11.98 ಕೋ.ರೂ. ವೆಚ್ಚದ ಗ್ಯಾಸ್ ಇನ್ಸುಲೇಟೆಡ್(ಜಿಐ) 3/11 ವಿದ್ಯುತ್ ಉಪಕೇಂದ್ರ(ಸಬ್‌ಸ್ಟೇಶನ್) ವನ್ನು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬುಡಾ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ನಗರ ನೀರು ಸರಬರಾಜು- ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಪುರಸಭೆ ಸದಸ್ಯರಾದ ಹರಿಪ್ರಸಾದ್, ಗಂಗಾಧರ ಪೂಜಾರಿ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್, ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರ, ಬಂಟ್ವಾಳ ತಹಶೀಲ್ದಾರ್ ಡಾ| ಸ್ಮಿತಾ ರಾಮು, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ ಡಿ., ಚೀಫ್ ಎಂಜಿನಿಯರ್ ಹರೀಶ್, ಅಧೀಕ್ಷಕ ಎಂಜಿನಿಯರ್ ಕೃಷ್ಣ ರಾಜ್, ಪುತ್ತೂರು ಇಇ ರಾಮಚಂದ್ರ ಎಂ., ಬಂಟ್ವಾಳ ಇಇ ಪ್ರಶಾಂತ್ ಪೈ, ಪಿಆರ್‌ಒ ವಸಂತ ಶೆಟ್ಟಿ, ಬಂಟ್ವಾಳ ಎಇಇ ನಾರಾಯಣ ಭಟ್, ವಿಟ್ಲ ಎಇಇ ಪ್ರವೀಣ್ ಜೋಶಿ, ಬೆಳ್ತಂಗಡಿ ಎಇಇ ಸಿ.ಎಚ್.ಶಿವಶಂಕರ್, ಬಂಟ್ವಾಳ ನಗರ ಪೊಲೀಸ್ ಇನ್‌ಸ್ಪೆಕ್ಟರ್ ವಿವೇಕಾನಂದ, ನಗರ ಪಿಎಸ್‌ಐ ಅವಿನಾಶ್ ಎಚ್.ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್ ಸುವರ್ಣ, ಮಹೇಶ್ ತುಪ್ಪೆಕಲ್ಲು, ಪುಷ್ಪರಾಜ್ ಚೌಟ, ಸುಕೇಶ್ ಚೌಟ, ಸೀಮಾ ಮಾಧವ, ಪುರುಷೋತ್ತಮ ಶೆಟ್ಟಿ ವಾಮದಪದವು, ಉದಯಕುಮಾರ್ ರಾವ್, ಸುದರ್ಶನ್ ಬಜ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಗಣೇಶ್‌ದಾಸ್, ಕೇಶವ ದೈಪಲ, ಯಶೋಧರ ಕರ್ಬೆಟ್ಟು, ವೆಂಕಪ್ಪ ಪೂಜಾರಿ, ಪ್ರಕಾಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಮೊದಲ ಉದ್ಘಾಟನೆ
ಕೆಪಿಟಿಸಿಎಲ್ ಮೂಲಕ ರಾಜ್ಯಾದ್ಯಂತ 110 ಕೆವಿ ಸಬ್‌ಸ್ಟೇಶನ್ ನಿರ್ಮಾಣ ಮಾಡಲಾಗುತ್ತಿದ್ದು, ಅದರ ಭಾಗವಾಗಿ 33 ಕೆವಿ ಸಬ್‌ಸ್ಟೇಶನ್ ಬಂಟ್ವಾಳದಲ್ಲಿ ಅನುಷ್ಠಾನಗೊಂಡಿದೆ. ಮೆಸ್ಕಾಂ ವ್ಯಾಪ್ತಿಯ ಬಂಟ್ವಾಳ, ಉರ್ವ, ಕೋಟ ಹಾಗೂ ಉದ್ಯಾವರ ಹೀಗೆ ನಾಲ್ಕು ಕಡೆಗಳಲ್ಲಿ ಅನುಷ್ಠಾನಗೊಂಡಿರುವ ಜಿಐ ಉಪಕೇಂದ್ರಗಳಲ್ಲಿ ಬಂಟ್ವಾಳದಲ್ಲಿ ಮೆಸ್ಕಾಂನ ಮೊದಲ ಉಪಕೇಂದ್ರ ಉದ್ಘಾಟನೆಗೊಳ್ಳುತ್ತಿದೆ ಎಂದು ಸುನಿಲ್ ಕುಮಾರ್ ಹೇಳಿದರು.