Advertisement

ಲಿಯೋನೆಲ್ ಮೆಸ್ಸಿ ದಾಖಲೆ ಮುರಿದ ಭಾರತ ಫುಟ್ ಬಾಲ್ ನಾಯಕ ಸುನೀಲ್ ಚೇತ್ರಿ

08:22 AM Jun 08, 2021 | Team Udayavani |

ದೋಹಾ: ಭಾರತೀಯ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೇತ್ರಿ ಮತ್ತೊಂದು ದಾಖಲೆ ಬರೆದಿದ್ದಾರೆ. ಪ್ರಸಕ್ತ ಆಡುತ್ತಿರುವ ಆಟಗಾರರ ಪೈಕಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲು ಹೊಡೆದಿರುವ ದಾಖಲೆಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

Advertisement

ದೋಹಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ವಾಲಿಫೈಯರ್ ಕೂಟದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತೀಯ ನಾಯಕ ಈ ದಾಖಲೆ ಮಾಡಿದರು. ಈ ಪಂದ್ಯದಲ್ಲಿ 79 ಮತ್ತು 92ನೇ ನಿಮಿಷದಲ್ಲಿ ಗೋಲು ಬಾರಿಸಿದ ಚೇತ್ರಿ ತಂಡದ ಗೆಲುವಿಗೆ ಸಹಕಾರಿಯಾದರು.

ಈ ವೇಳೆ ಅರ್ಜೈಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ದಾಖಲೆಯಲ್ಲಿ ಸುನೀಲ್ ಚೇತ್ರಿ ಮುರಿದರು. ಲಿಯೋನೆಲ್ ಮೆಸ್ಸಿ 143  ಪಂದ್ಯಗಳಲ್ಲಿ 72 ಗೋಲಗಳನ್ನು ಗಳಿಸಿದ್ದಾರೆ. ಆದರೆ ಸುನೀಲ್ ಕೇವಲ 117 ನೇ ಪಂದ್ಯದಲ್ಲಿ74 ಗೋಲು ಬಾರಿಸಿದರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಪೋರ್ಚುಗಲ್ ನ ಕ್ರಿಸ್ಟಿಯಾನೋ ರೊನಾಲ್ಡೊ. ಅವರು 174 ಪಂದ್ಯಗಳಲ್ಲಿ 103 ಗೋಲು ಗಳಿಸಿದ್ದಾರೆ.

ಸತತ 11 ಸೋಲುಗಳ ಬಳಿಕ ಭಾರತ ಮೊದಲ ಜಯ ಗಳಿಸಿತು. ಇದರೊಂದಿಗೆ ವಿಶ್ವಕಪ್ ಕ್ವಾಲಿಫೈಯರ್ ನ ಇ ಗ್ರೂಪ್ ನಲ್ಲಿ ಮೂರನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next