ಬೆಂಗಳೂರು: ರಾಜ್ಯ ಸರಕಾರಿ ವಿಶ್ವವಿದ್ಯಾ ನಿಲಯಗಳಲ್ಲಿ ಏಕರೂಪ ಪರೀಕ್ಷೆ ವೇಳಾಪಟ್ಟಿ, ಪರೀಕ್ಷೆ ಶುಲ್ಕ, ಅಂತರ್ ವಿಶ್ವ ವಿದ್ಯಾ ನಿಲಯದಲ್ಲಿ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಕೆಲವೇ ದಿನ ಗಳಲ್ಲಿ ಏಕರೂಪ ನೀತಿ ಜಾರಿಗೆ ತರುವು ದಾಗಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಪ್ರಕಟಿಸಿದ್ದಾರೆ. ಮಂಗಳ ವಾರ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ನಡೆದ ಕುಲಸಚಿವರ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರು ಈ ಮಾಹಿತಿ ನೀಡಿದ್ದಾರೆ.
ವಿ.ವಿ.ಗಳಲ್ಲಿ ಕಾರ್ಯಕ್ರಮಗಳಿಗೆ ಅತಿಥಿ ಗಳನ್ನು ಆಹ್ವಾನಿಸುವಾಗ ಅನ ವಶ್ಯಕ ಗೊಂದಲಕ್ಕೆ ಅವಕಾಶ ಮಾಡಿ ಕೊಡ ಬಾರದು. ಒಂದು ವೇಳೆ ವಿವಾದಾತ್ಮಕ ಅತಿಥಿಗಳನ್ನು ಕರೆಸಿ ಅನವಶ್ಯಕ ಗೊಂದಲಕ್ಕೆ ಎಡೆ ಮಾಡಿ ಕೊಟ್ಟರೆ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳ ಲಾಗುವುದು. ಸಂವಿ ಧಾನದ ಚೌಕಟ್ಟಿನಲ್ಲಿ ನಾವು ವಿಶ್ವ ವಿದ್ಯಾ ನಿಲಯಗಳನ್ನು ಕಟ್ಟಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ವಿ.ವಿ.ಗಳು, ಕಾಲೇಜುಗಳು ಖಾಸಗಿ ವಿ.ವಿ.ಗಳ ಜತೆಗೆ ಪೈಪೋಟಿ ನಡೆಸ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವೃತ್ತಿ ಬದುಕಿಗೆ ಆಸರೆ ಯಾಗುವ ಕೋರ್ಸ್‌ಗಳನ್ನು ಆರಂಭಿ ಸುವ ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸುವಂತೆ ಕುಲ ಸಚಿವರಿಗೆ ಸೂಚಿಸಿದರು.
ಹೊಸ ವಿ.ವಿ.ಗಳ ಜತೆಗೆ ಹಳೇ ವಿ.ವಿ.ಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದರು.