Advertisement
2025-26ನೇ ಸಾಲಿನ ಶೈಕ್ಷಣಿಕ ಮತ್ತು ಸಂಯೋಜನ ವೇಳಾಪಟ್ಟಿಯು ಅ. 2024ರಿಂದಲೇ ಆರಂಭಗೊಂಡು 2025ರ ಮಾರ್ಚ್/ಎಪ್ರಿಲ್‌ನಲ್ಲಿ ಅಂತ್ಯಗೊಳ್ಳಲಿದೆ. ಎಪ್ರಿಲ್‌ನಿಂದಲೇ ಪದವಿಯ ಪ್ರಥಮ ಸೆಮಿಸ್ಟರ್‌ಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಉನ್ನತ ಶಿಕ್ಷಣ ಇಲಾಖೆ ಮೂರ್ನಾಲ್ಕು ವರ್ಷದಿಂದ ಏಕರೂಪದ ವೇಳಾಪಟ್ಟಿ ತಯಾರಿಸಿ, ಜಾರಿಗೊಳಿಸುವ ಪ್ರಯತ್ನ ನಡೆಸುತ್ತಿದ್ದು ಅಂತಿಮವಾಗಿ ಇದೀಗ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಸಿದ್ಧತೆ ಆರಂಭಿಸಿದೆ.
ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿ ಪ್ರಕ್ರಿಯೆ ಆ. 19ರಿಂದ ಆರಂಭಗೊಳ್ಳಲಿದೆ. ಸಪ್ಟೆಂಬರ್ 1ಕ್ಕೆ ಪ್ರಥಮ, ತೃತೀಯ ಸೆಮಿಸ್ಟರ್‌ನ ತರಗತಿಗಳು ಆರಂಭಗೊಳ್ಳಲಿದ್ದು ಡಿ. 19ಕ್ಕೆ ಅಂತ್ಯಗೊಳ್ಳಲಿದೆ. ಪರೀಕ್ಷೆಗಳು ಡಿ.12ಕ್ಕೆ ಆರಂಭವಾಗಲಿದೆ. ಯುಜಿಸಿ ನಿಯಮದಂತೆ 2025-26ರ ಸಾಲಿನಲ್ಲಿ ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ 90 ದಿನಗಳ ಕೆಲಸದ ಅವಧಿ ಇರುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ವಾರದಲ್ಲಿ ಆರು ದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಡಿ ಬರುವ ಸಾರ್ವಜನಿಕ ವಿ.ವಿ.ಗಳಲ್ಲಿ ಸಂಯೋಜನ ಪ್ರಕ್ರಿಯೆ
ಯನ್ನು ಇದೇ ಅ. 9ರಿಂದ ಆರಂಭಿಸಿ 2025ರ ಮಾರ್ಚ್ 31ರೊಳಗೆ ಪೂರ್ಣಗೊಳಿಸಬೇಕು. ಖಾಸಗಿ ವಿ.ವಿ.ಗಳ ಸೀಟು ಹೆಚ್ಚಳ, ಕಡಿತ, ಹೊಸ ಸಂಯೋಜನೆ ಸೇರಿದಂತೆ ಇನ್ನಿತರ ಚಟುವಟಿ ಕೆಗೆ ಇದೇ ಅ. 7ರಿಂದ ಅವಕಾಶ ಆರಂಭವಾಗ ಲಿದ್ದು ಮಾ. 31ಕ್ಕೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ.
Related Articles
Advertisement
ಎಪ್ರಿಲ್ 18, 19ಕ್ಕೆ ಸಿಇಟಿಎಂಜಿನಿಯರಿಂಗ್, ನರ್ಸಿಂಗ್, ಪಶು ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)- 2025-26ನೇ ಸಾಲಿನಲ್ಲಿ ಎಪ್ರಿಲ್ 18 ಮತ್ತು ಎ. 19ರಂದು ನಡೆಯಲಿದೆ. ಮೇ 28ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದ್ದು ಜೂನ್ 25ಕ್ಕೆ ಮೊದಲ ಸುತ್ತಿನ ಕೌನ್ಸಿಲಿಂಗ್, ಜುಲೈ 10ಕ್ಕೆ ಎರಡನೇ ಸುತ್ತಿನ ಕೌನ್ಸಿಲಿಂಗ್ ಮತ್ತು ಜು. 25 ಎರಡನೇ ಸುತ್ತಿನ ಮುಂದುವರಿದ ಕೌನ್ಸಿಲಿಂಗ್ ನಡೆಯಲಿದ್ದು ಆಗಸ್ಟ್ 1ಕ್ಕೆ ತರಗತಿ ಆರಂಭವಾಗಲಿದೆ. ಇನ್ನು ಎಂಬಿಎ, ಎಂಸಿಎ, ಎಂಟೆಕ್ ಮತ್ತು ಎಂ. ಅರ್ಕ್ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಿಇಟಿ ಜೂನ್ 30ಕ್ಕೆ ನಿಗದಿಯಾಗಿದ್ದು ಆಗಸ್ಟ್ 5ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮೊದಲ ಸುತ್ತಿನ ಕೌನ್ಸಿಲಿಂಗ್ ಆ.26, ಎರಡನೇ ಸುತ್ತಿನ ಕೌನ್ಸಿಲಿಂಗ್ ಸೆ.4ಕ್ಕೆ ನಡೆಯಲಿದ್ದು ಸೆ.10ಕ್ಕೆ ತರಗತಿಗಳು ಆರಂಭವಾಗಲಿವೆ.