Advertisement

ಪಂಜ್ ಶೀರ್ ನಲ್ಲಿ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳ ದಾಳಿ

08:37 AM Sep 07, 2021 | Team Udayavani |

ಕಾಬೂಲ್: ಅಫ್ಘಾನಿಸ್ತಾನದ ಪಂಜ್‌ ಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್ ಸಂಪೂರ್ಣ ವಿಜಯ ಸಾಧಿಸಿದ ಒಂದು ದಿನದ ಬಳಿಕ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳು ದಾಳಿ ನಡೆಸಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.

Advertisement

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಪಡೆಗಳ ಕೊನೆಯ ಭದ್ರಕೋಟೆಯಾದ ಪಂಜ್‌ಶೀರ್ ಪ್ರಾಂತ್ಯವನ್ನು “ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ” ಎಂದು ಸೋಮವಾರ ತಾಲಿಬಾನ್ ಹೇಳಿಕೊಂಡಿದೆ. ಪಂಜಶೀರ್ ಗವರ್ನರ್ ಕಚೇರಿಯಲ್ಲಿ ಬಂದೂಕು ಹಿಡಿದ ತಾಲಿಬಾನ್ ಹೋರಾಟಗಾರರು ಧ್ವಜ ಹಾರಿಸಿದ ವಿಡಿಯೋಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ:24 ವರ್ಷಗಳ ಅನಂತರ ಓಪನ್‌ ಆದ ಲಿಫ್ಟ್ ನಲ್ಲಿ ಸಿಕ್ಕಿತು ಅಸ್ಥಿಪಂಜರ! 

ಈ ಮೂಲಕ 40 ವರ್ಷಗಳಿಂದ ತಾಲಿಬಾನಿಗಳ ವಿರುದ್ಧದ ಪ್ರಬಲ ಹೋರಾಟವನ್ನು ಕುಂದಿಸಿದಂತೆ ಆಗಿದೆ. 1990ರಲ್ಲಿ ಪೂರ್ಣ ಪ್ರಮಾಣದಲ್ಲಿ ಅಫ್ಘಾನಿಸ್ತಾನ ಉಗ್ರರ ವಶವಾಗಿದ್ದರೂ, ಪಂಜ್‌ಶೀರ್‌ ಅಹ್ಮದ್‌ ಮಸೂದ್‌ನ ನಿಯಂತ್ರಣದಲ್ಲಿಯೇ ಇತ್ತು. ಉಗ್ರ ಸಂಘಟನೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಮತ್ತು ರಾಷ್ಟ್ರೀಯ ಪ್ರತಿರೋಧ ಪಡೆಯ ಮುಖಂಡ ಅಹ್ಮದ್ ಮಸೂದ್‌ ತಜಿಕಿಸ್ತಾನಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ

Advertisement

Udayavani is now on Telegram. Click here to join our channel and stay updated with the latest news.

Next