ಜೈಪುರ: ಮದ್ಯ ವ್ಯಸನಿಯೊಬ್ಬ ಟಾಯ್ಲೆಟ್ ಕ್ಲೀನರ್ ಕುಡಿದು ಮೃತಪಟ್ಟಿರುವ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ವ್ಯಕ್ತಿಯನ್ನು ಕುಮ್ಹೇರ್ ನಿವಾಸಿ ವಿನೋದ್ ಎಂದು ಗುರುತಿಸಲಾಗಿದೆ.
ವಿನೋದ್ ಪ್ರತಿನಿತ್ಯ ಮದ್ಯ ಕುಡಿದು ಮನೆಗೆ ಬರುತ್ತಿದ್ದ. ಪತಿಯ ಈ ನಶೆಯ ಹುಚ್ಚಿಗೆ ಬೇಸತ್ತ ಪತ್ನಿ, ನಿತ್ಯ ಜಗಳವಾಡುತ್ತಿದ್ದಳು. ದಂಪತಿಗಳ ನಡುವೆ ಪ್ರತಿನಿತ್ಯ ಕಲಹ ಉಂಟಾಗುತ್ತಿತ್ತು. ಪತ್ನಿಯ ಮಾತಿನಿಂದ ಸಿಟ್ಟಾಗಿ, ಮನನೊಂದಿದ್ದ ಪತಿ ವಿನೋದ್ ವಾಶ್ ರೂಮ್ ಗೆ ತೆರಳಿ, ಅಲ್ಲಿದ್ದ ಟಾಯ್ಲೆಟ್ ಕ್ಲೀನರ್ ಕುಡಿದಿದ್ದಾನೆ. ಬಳಿಕ ಅಸ್ವಸ್ಥಗೊಂಡು ಕಿರುಚಾಡಲು ಶುರು ಮಾಡಿದ್ದಾನೆ. ಈ ವೇಳೆ ವಿನೋದ್ ಸಹೋದರಿ ಬಂದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವಿನೋದ್ ಆದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.