Advertisement
ಕ್ಷೇತ್ರದ ಉಳಿ, ಮಣಿನಾಲ್ಕೂರು, ಬಡಗಕಜೆಕಾರು, ಪಿಲಾತಬೆಟ್ಟು, ಕಾವಳಮೂಡೂರು, ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಉದಯವಾಣಿ ತಂಡ ಜನರಿಂದ ಅಭಿಪ್ರಾಯ ಸಂಗ್ರಹಿಸಿತು. ಇದು ದೊಡ್ಡ ಚುನಾವಣೆ, ಇಲ್ಲಿ ಗೆದ್ದವರಿಗೆ ನಮ್ಮ ಸಮಸ್ಯೆ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಸ್ಥಳೀಯವಾಗಿ ಗೆದ್ದವರು ಸಮಸ್ಯೆ ಪರಿಹರಿಸುತ್ತಿಲ್ಲ ಎಂಬ ಆಕ್ರೋಶವಿದೆ.
ಕಾಂಗ್ರೆಸ್ – ಬಿಜೆಪಿಗಳಿಂದ ಪ್ರಚಾರ, ಸಭೆಗಳು ನಡೆಯುತ್ತಿವೆ. ಅಬ್ಬರವೇನೂ ಕಾಣುತ್ತಿಲ್ಲ. ಪಿಲಾತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಪುಂಜಾಲಕಟ್ಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಪೇಟೆಯು ಬಂಟ್ವಾಳ, ಬೆಳ್ತಂಗಡಿ ಕ್ಷೇತ್ರಗಳಿಗೆ ಹಂಚಿ ಹೋಗಿರುವುದು ವಿಶೇಷ ಎನ್ನುತ್ತಾರೆ ಮಜಲೋಡಿಯ ರಮೇಶ್ ಶೆಟ್ಟಿ.
Related Articles
ಜನರು ಓಟಿನ ಬಗ್ಗೆ ಮಾತನಾಡುವುದು ಕಡಿಮೆ. ರಾಜಕೀಯದವರು ಪ್ರಚಾರ ಮಾಡುತ್ತಾರೆ. ಅಭಿವೃದ್ಧಿಯ ಕುರಿತು ನಮ್ಮ ಬೇಡಿಕೆ ಈಡೇರಿದೆ ಎನ್ನುತ್ತಾರೆ ಕಾವಳ ಕಟ್ಟೆಯ ಸೈಯದ್ ಸರ್ಪರಾಜ್.
Advertisement
ಕಕ್ಕೆಪದವು ಪ್ರದೇಶದಲ್ಲಿ ಸರಕಾರಿ ಆರೋಗ್ಯ ಕೇಂದ್ರ, ಸಾರ್ವಜನಿಕ ಶೌಚಾಲಯ ಬೇಕು ಎಂಬುದು ಪ್ರಮುಖ ಬೇಡಿಕೆ ಎನ್ನುತ್ತಾರೆ ಕಕ್ಕೆಪದವಿನ ಅಬ್ದುಲ್ ಖಾದರ್ ಹಾಗೂ ಪ್ರಶಾಂತ್.
ಕಿರಣ್ ಸರಪಾಡಿ