Advertisement

ಛೇ…ಮೋಡದಿಂದ ಸೂರ್ಯಗ್ರಹಣ ಕೌತುಕ ವೀಕ್ಷಿಸಲು ಆಗಿಲ್ಲ…ಪ್ರಧಾನಿ ನರೇಂದ್ರ ಮೋದಿ ಟ್ವೀಟ್

09:58 AM Dec 27, 2019 | Nagendra Trasi |

ನವದೆಹಲಿ: ಅಪರೂಪದ ಕಂಕಣ ಸೂರ್ಯಗ್ರಹಣ ವೀಕ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಟ್ಟೀಟ್ ಮಾಡಿದ್ದು, ಇದೊಂದು ದುರದೃಷ್ಟಕರ…ಮೋಡಗಳಿಂದಾಗಿ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

Advertisement

ಹಲವು ಭಾರತೀಯರಂತೆ ನಾನೂ ಕೂಡಾ ಗ್ರಹಣ ಕೌತುಕ ವೀಕ್ಷಿಸುವ ಸಂತಸದಲ್ಲಿದ್ದೆ. ಆದರೆ ದುರದೃಷ್ಟ ಮೋಡದಿಂದಾಗಿ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಾಗಿಲ್ಲ. ಆದರೆ ಕೋಝಿಕೋಡ್ ನಲ್ಲಿ ಸೂರ್ಯಗ್ರಹಣದ ಕ್ಷಣಿಕ ದರ್ಶನ ಮಾಡುವಂತಾಯಿತು. ಅಲ್ಲದೇ ಉಳಿದ ಭಾಗದಲ್ಲಿ ಗೋಚರಿಸಿದ ಸೂರ್ಯಗ್ರಹಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದೆ. ಗ್ರಹಣದ ಕುರಿತು ಖಗೋಳ ತಜ್ಞರ ಜತೆ ನಡೆಸಿದ ಸಂವಹನದಲ್ಲಿ ನನ್ನ ಜ್ಞಾನ ಮತ್ತಷ್ಟು ಶ್ರೀಮಂತವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಬೆಳಗ್ಗೆ 8.04ನಿಮಿಷಕ್ಕೆ ಆರಂಭವಾಗಿದ್ದು, 11.15ನಿಮಿಷಕ್ಕೆ ಮುಕ್ತಾಯವಾಗಿತ್ತು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣ ಕೌತುಕ ಪೂರ್ಣಪ್ರಮಾಣದಲ್ಲಿ ಗೋಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next