Advertisement
“ಇಂದು ಪಂದ್ಯವನ್ನು ಆಡಲು ಸಾಧ್ಯವಾಗದೇ ಇರುವುದು ನಮ್ಮ ಪಾಲಿಗೆ ದುರದೃಷ್ಟವೇ ಸರಿ. ಆದರೆ ಇದೇ ನಿಯಮ. ನಮ್ಮಿಂದೇನೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರದಿದ್ದರೆ ಇಂದು ಫೈನಲ್‌ಗೆ ತೇರ್ಗಡೆಯಾಗುತ್ತಿರಲಿಲ್ಲ. ಇಂಗ್ಲೆಂಡ್ ಕೂಡ ಬಲಿಷ್ಠವಾಗಿತ್ತು. ಆದರೆ ಈ ನಿಯಮದಿಂದ ಅವರಿಗೆ ಭಾರೀ ನಷ್ಟವಾಗಿದೆ’ ಎಂದು ಹರ್ಮನ್‌ಪ್ರೀತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಗ್ಲೆಂಡ್ ನಾಯಕಿ ಹೀತರ್ ನೈಟ್ ಕೂಡ ಇಂಥ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಮಳೆ ನಿಯಮ ಬದಲಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. “ನಿಜಕ್ಕೂ ನಿರಾಸೆಯಾಗಿದೆ. 4 ಬಲಿಷ್ಠ ತಂಡಗಳು ಇಲ್ಲಿ ಸೆಣಸುತ್ತಿದ್ದವು. ಉತ್ತಮ ಸ್ಪರ್ಧೆ ಏರ್ಪಡುವ ಎಲ್ಲ ಸಾಧ್ಯತೆ ಇತ್ತು. ಆದರೆ ಆಡದೇ ಹೊರಬಿದ್ದಿರುವುದು ನೋವುಂಟು ಮಾಡಿದೆ. ನಿಯಮಗಳಿಗೆ ಎಲ್ಲರೂ ಮೊದಲೇ ಸಹಿ ಹಾಕಿ ಸಮ್ಮತಿಸಿರುತ್ತಾರೆ ನಿಜ, ಆದರೆ ಇಲ್ಲಿ ಬದಲಾವಣೆಯ ಅಗತ್ಯವಿದೆ. ಬೇರೆ ತಂಡಕ್ಕೆ ಇಂಥ ಅನುಭವ ಆಗಬಾರದು. ಯಾವ ತಂಡವೂ ಮಳೆಯಿಂದಾಗಿ ವಿಶ್ವಕಪ್‌ನಿಂದ ಹೊರಬೀಳಲು ಬಯಸುವುದಿಲ್ಲ. ಫೈನಲ್ ಪಂದ್ಯಕ್ಕೆ ಇಂಥ ವಿಘ್ನ ಎದುರಾಗದಿರಲಿ…’ ಎಂದು ಹೀತರ್ ನೈಟ್ ಹೇಳಿದರು