ಹೊಸದಿಲ್ಲಿ: ತುರ್ತು ಪರಿಸ್ಥಿತಿಯ 48ನೇ ವರ್ಷದ ಸಂದರ್ಭದಲ್ಲಿ ಪ್ರಧಾನಿ ಮೋದಿ, 1975ರ ಆ ಸಮಯವನ್ನು ಮರೆಯಲಾಗದು ದಿನಗಳು ಎಂದು ಕರೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿಯ ಕರಾಳ ದಿನಗಳು ನಮ್ಮ ಇತಿಹಾಸದಲ್ಲಿ ಮರೆಯಲಾಗದ ಅವಧಿಯಾಗಿ ಉಳಿದಿವೆ ಎಂದಿದ್ದಾರೆ.
“ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ನಮ್ಮ ಪ್ರಜಾಪ್ರಭುತ್ವದ ಮನೋಭಾವವನ್ನು ಬಲಪಡಿಸಲು ಶ್ರಮಿಸಿದ ಎಲ್ಲ ಧೈರ್ಯಶಾಲಿ ಜನರಿಗೆ ನಾನು ಗೌರವ ಸಲ್ಲಿಸುತ್ತೇನೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳು ನಮ್ಮ ಇತಿಹಾಸದಲ್ಲಿ ಮರೆಯಲಾಗದ ಅವಧಿಯಾಗಿ ಉಳಿದಿವೆ, ನಮ್ಮ ಸಂವಿಧಾನವು ಆಚರಿಸುವ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೆ ಹಲವಾರು ವಿರೋಧ ಪಕ್ಷಗಳು “ಅಘೋಷಿತ ತುರ್ತುಪರಿಸ್ಥಿತಿ” ಹೇರಿವೆ ಎಂದು ಆರೋಪಿಸಿದ್ದಾರೆ.
ಭಾರತೀಯ ಜನತಾ ಪಕ್ಷವು ಇಂದಿರಾ ಗಾಂಧಿಯವರ ಮುಖವಿರುವ ಪೋಸ್ಟರ್ ಟ್ವೀಟ್ ಮಾಡಿ “ಭಾರತೀಯ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ” ಎಂದು ಬರೆದುಕೊಂಡಿದೆ.