Advertisement
ಕಳೆದ ವರ್ಷ ಮಳೆಗಾಲದಲ್ಲಿ ಮೂಲರಪಟ್ಣದಲ್ಲಿ ಹಾದುಹೋಗಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ದಿಢೀರ್ ಆಗಿ ಕುಸಿತಗೊಂಡು ಎಡಪದವು – ಬಂಟ್ವಾಳ ಸಂಪರ್ಕ ಕಡಿತ ಗೊಂಡಿತ್ತು. ಇದರಿಂದ ಕುಪ್ಪೆಪದವು, ಮುತ್ತೂರು, ನೋಣಲ್, ಎಡಪದವು, ಗಂಜಿಮಠದಿಂದ ಮೂಲರಪಟ್ಣ ಮುಖಾಂತರ ಬಂಟ್ವಾಳ ಬಿ.ಸಿ. ರೋಡ್‌ಗೆ ಸಂಪರ್ಕಿಸುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
Related Articles
ಕುಸಿದು ಬಿದ್ದ ಸೇತುವೆಯ ಭಾಗ ದಲ್ಲಿಯೇ ಮತ್ತೂಂದು ಸೇತುವೆ ನಿರ್ಮಿ ಸಲು ಸುಮಾರು 14 ಕೋಟಿ ರೂ. ಮೊತ್ತದ ಅಂದಾಜುಪಟ್ಟಿ ತಯಾರಿ ಸಲಾಗಿದ್ದು, ಈ ಪ್ರಕ್ರಿಯೆ ಕಡತದಲ್ಲಿಯೇ ಬಾಕಿಯಾಗಿದೆ. ಮೂಲರಪಟ್ಣ ಸೇತುವೆ ಕುಸಿದು ವರ್ಷವಾಗುತ್ತಾ ಬಂದಿ ದೆ. ಇಷ್ಟು ದಿನಗಳ ಅಂತರದಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು.
Advertisement
ಸೇತುವೆ ಕಾಮಗಾರಿ ಆರಂಭ ಗೊಂಡು ಪೂರ್ಣವಾಗ ಬೇಕಾದರೆ ಕನಿಷ್ಠ ಎರಡು ವರ್ಷ ವಾದರೂ ಬೇಕು. ಆದರೆ ಸದ್ಯ ಮಳೆಗಾಲ ಆರಂಭವಾಗುವುದರಿಂದ ಇನ್ನು ಆರು ತಿಂಗಳ ಕಾಲ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಾಮಗಾರಿ ಇನ್ನೂ ಆರಂಭವಾಗಿ ಸೇತುವೆ ಪೂರ್ಣ ವಾಗುವವರೆಗೆ ಇಲ್ಲಿನ ಜನರ ವನವಾಸ ತಪ್ಪುವು ದಿಲ್ಲ ಜನರ ಆವಶ್ಯಕತೆಗನುಗುಣ ವಾಗಿ ಕಡಿಮೆ ಅವ ಧಿಯಲ್ಲಿ ಪೂರ್ಣವಾಗುವಂತೆ ನವೀನ ಮಾದರಿಯಲ್ಲಿ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಟೆಂಡರ್ ಕರೆದು ಕಾಮಗಾರಿ ಆರಂಭಮೂಲರಪಟ್ಣ ನೂತನ ಸೇತುವೆ ಕಾಮಗಾರಿಗೆ ಒಟ್ಟು 14.2 ಕೋಟಿ ರೂ. ಅಗತ್ಯವಿದ್ದು, ಟೆಂಡರ್ ಕರೆ ಯಲು ಸಭೆ ಯಲ್ಲಿ ಚರ್ಚಿ ಸಲಾಗುವುದು. ನೂತನ ಸೇತುವೆ ನಿರ್ಮಾಣಕ್ಕೆ ಬೆಂಗಳೂರಿನ ತಂತ್ರಜ್ಞರೊಬ್ಬರು ಆಗಮಿಸಿ ಪರಿಶೀಲಿಸಿದ್ದಾರೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಮೇಲ್ಗಡೆ ದುಂಡಗಿನ ಕಮಾನುಗಳ ಮಾದರಿಯಲ್ಲಿ ಕೂಳೂರು ಮಾದರಿಯ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.
- ರವಿಕುಮಾರ್, ಪಿಡಬ್ಲ್ಯುಡಿ,ಎಂಜಿನಿಯರ್