ಚಂಡೀಗಢ: ಹರಿಯಾಣ ವಿಧಾನಸಭೆ (Haryana Poll) ಚುನಾವಣೆಯ ಮತಎಣಿಕೆ ಮಂಗಳವಾರ (ಅ.08) ನಡೆಯುತ್ತಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದೆ. ಆದರೆ ಚುನಾವಣ ಫಲಿತಾಂಶ ಘೋಷಿಸುವಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಚುನಾವಣ ಆಯೋಗಕ್ಕೆ ದೂರು ನೀಡಿದೆ.
“ಹರಿಯಾಣ ವಿಧಾನಸಭೆ ಚುನಾವಣೆಯ ಮತಎಣಿಕೆ ಬೆಳಗ್ಗೆ 9ಗಂಟೆಯಿಂದ 11ರವರೆಗೆ ಫಲಿತಾಂಶದ ವಿವರ ನೀಡುವಲ್ಲಿ ವಿವರಿಸಲಾಗದ ನಿಧಾನಗತಿ ಅನುಸರಿಸಲಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಆಯೋಗಕ್ಕೆ” ಬರೆದ ಪತ್ರದಲ್ಲಿ ತಿಳಿಸಿದೆ.
ಇದೊಂದು ಕೆಟ್ಟ ರೀತಿಯ ಪ್ರಕ್ರಿಯೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅದರ ಸುದ್ದಿಗಳು ವಿಜೃಂಭಿಸುತ್ತಿರುವುದೇ ಅದಕ್ಕೆ ಉದಾಹರಣೆಯಾಗಿದೆ. ಮತಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ಆದರೆ ಫಲಿತಾಂಶ ಪ್ರಕಟಿಸಲು ನಿಧಾನಗತಿ ಅನುಸರಿಸಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಇದನ್ನೂ ಓದಿ:Bigg Boss Tamil 8: ಬಿಗ್ ಬಾಸ್ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ
ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ಫಲಿತಾಂಶದ ನಿಜವಾದ ಮತ್ತು ಸಮರ್ಪಕವಾದ ಅಂಕಿಅಂಶವನ್ನು ವೆಬ್ ಸೈಟ್ ನಲ್ಲಿ ಅಪ್ ಡೇಟ್ ಮಾಡುವಂತೆ ನಿಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿ. ಅಲ್ಲದೇ ಸುಳ್ಳು ಸುದ್ದಿ ಹರಡುವುದನ್ನು ತಡೆಯಬೇಕು ಎಂದು ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
ಹರಿಯಾಣ ವಿಧಾನಸಭೆ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಈವರೆಗಿನ ಲೆಕ್ಕಚಾರದಲ್ಲಿ ಆಡಳಿತಾರೂಢ ಬಿಜೆಪಿ 51 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಿದ್ಧತೆಯಲ್ಲಿದೆ. ಕಾಂಗ್ರೆಸ್ 34 ಕ್ಷೇತ್ರದಲ್ಲಿ ಮುನ್ಡೆ ಸಾಧಿಸಿದೆ.