Advertisement

ಶ್ರೀಚನ್ನಕೇಶವ ದೇವಾಲಯಕ್ಕೆ ಯುನೆಸ್ಕೋ ತಂಡ ಭೇಟಿ

01:09 PM Sep 18, 2022 | Team Udayavani |

ತಿ.ನರಸೀಪುರ: ವಿಶ್ವ ಪಾರಂಪರಿಕ ತಾಣಗಳಪಟ್ಟಿಗೆ ಸೇರಿಸುವ ಹಿನ್ನೆಲೆಯಲ್ಲಿ ತಾಲೂಕಿನ ಸೋಮನಾಥಪುರದ ಪ್ರಾಚೀನ ಸ್ಮಾರಕ ಶ್ರೀಚನ್ನಕೇಶವ ದೇವಾಲಯಕ್ಕೆ ಯುನೆಸ್ಕೋ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.

Advertisement

ಟಿಯಾಂಗ್‌ ಕಿಯಾನ್‌ ಬೂನ್‌ ನೇತೃತ್ವದ ತಂಡಕ್ಕೆ ಇನ್ಫೋಸಿಸ್‌ ಫೌಂಡೇಶನ್‌ನ ಸುಧಾಮೂರ್ತಿ, ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ರಾಜ್ಯ ಪ್ರಾಚ್ಯ ವಸ್ತು ಅಧಿಕಾರಿಗಳು ದೇವಾಲಯದ ಶಿಲ್ಪಕಲೆ, ಐತಿಹ್ಯಗಳು ಹಾಗೂ ಹೊಯ್ಸಳರ ಕಾಲದ ಶಿಲ್ಪಕಲೆ, ಕುಸುರಿ ಕೆತ್ತನೆ ಗಳ ಬಗ್ಗೆ ವಿವರ ನೀಡಿದರು. ದೇವಾಲಯದ ರಚನೆ, ಗರ್ಭಗುಡಿ, ಪ್ರಾಂಗಣ, ಕೆತ್ತನೆ ಕುಸುರಿ ಸೇರಿದಂತೆ ಶಿಲ್ಪಕಲೆಗಳ ಬಗ್ಗೆ ಸಮಗ್ರ ವಾಗಿ ಪರಿಶೀಲಿಸಿದ ತಂಡ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದೇವಾಲಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡ ಲಾಗುವುದು. ಅಂತಿಮವಾಗಿ ಉನ್ನತಮಟ್ಟದ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು.

ಬಳಿಕ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಸ್ಥಳೀಯರೊಂದಿಗೆ ಸಭೆ ಹಾಗೂ ಸಂವಾದ ನಡೆಸಿ ಸಾರ್ವಜನಿಕ ಅಭಿಪ್ರಾಯ ಪಡೆದರು.

ಈ ವೇಳೆ ಇನ್ಫೋಸಿಸ್‌ ಫೌಂಡೇಶನ್‌ನ ಸುಧಾ ಮೂರ್ತಿ ಮಾತನಾಡಿ, ಸೋಮನಾಥಪುರ ದೇವಾಲಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯಲಿದೆ. ವಿದೇಶಿ ಪ್ರವಾಸಿಗರ ಭೇಟಿ ಹೆಚ್ಚಾಗಿ ಸ್ಥಳೀಯ ವ್ಯಾಪಾರ ವಹಿವಾಟು ಉತ್ತಮವಾಗಬಹುದು ಹಾಗೂ ಸ್ಥಳೀಯರಿಗೆ ಆರ್ಥಿಕ ಶಕ್ತಿ ಸಿಗಬಹುದು ಎಂದು ಅಭಿಪ್ರಾಯಪಟ್ಟರು.

ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್‌ ಮಾತನಾಡಿ, ಯುನೆಸ್ಕೋ ತಜ್ಞರ ತಂಡ ಪರಿಶೀಲಿಸಿದ ವರದಿ ಯುನೆಸ್ಕೋಗೆ ನೀಡಲಿದೆ. ರಾಜ್ಯದ ಹಂಪಿ ಮತ್ತು ಪಟ್ಟದಕಲ್ಲು ಸೇರ್ಪಡೆಯಾಗಿದ್ದು, ಶಿಲ್ಪಕಲೆಗೆ ಹೆಸರಾದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ವಿಶ್ವಾಸವಿದೆ. ಪಟ್ಟಿಗೆ ಸೇರ್ಪಡೆಯಾದಲ್ಲಿ ಪ್ರವಾ ಸೋದ್ಯಮ ಅಭಿವೃದ್ಧಿಯಾಗಿ ಅಗತ್ಯ ಮೂಲಭೂತ ಸೌಕರ್ಯಗಳು ಸಿಗಲಿದೆ ಎಂದರು. ‌

Advertisement

ಭಾರತೀಯ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಅಪರ ಮಹಾ ನಿರ್ದೇಶಕ ಜಾಹನ್ವಿಜ್‌ ಶರ್ಮಾ, ಎಎಸ್‌ಐ ನಿರ್ದೇಶಕ ಮದನ್‌ ಸಿಂಗ್‌ ಚೌಹಾಣ್‌, ಪ್ರಾದೇಶಿಕ ನಿರ್ದೇಶಕ ಡಾ.ಜಿ.ಮಹೇಶ್ವರಿ, ಎಎಸ್‌ಐ ಅಧಿಕಾರಿ ಬಿಪಿನ್‌ ಚಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಪುರಾತತ್ವ ಇಲಾಖೆ ಜಂಟಿ ನಿರ್ದೇಶಕಿ ಮಂಜುಳಾ, ತಹಶೀಲ್ದಾರ್‌ ಸಿ.ಜಿ.ಗೀತಾ, ಉಪತಹಶೀಲ್ದಾರ್‌ ಸುಬ್ರಮಣ್ಯ, ತಾಪಂ ಇಒ ಸಿ.ಕೃಷ್ಣ, ಜಿಪಂ ಮಾಜಿ ಸದಸ್ಯ ಜಯಪಾಲ್‌ ಭರಣಿ, ಗ್ರಾ.ಪಂ.ಅಧ್ಯಕ್ಷೆ ಅರ್ಚನಾ .ಉಪಾಧ್ಯಕ್ಷ ಸಿದ್ದಪ್ಪ ಮುಖಂಡರಾದ ರಾಮಲಿಂಗಯ್ಯ ಕಾಂತರಾಜು, ಅಶೋಕ, ಪಿಡಿಒ ಸಂತೋಷ್‌ ಕುಮಾರ್‌ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಗ್ರಾಮಸ್ಥರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next