Advertisement

ಕುಂಭಮೇಳಕ್ಕೆ “ಅವ್ಯಕ್ತ ಸಾಂಸ್ಕೃತಿಕ ಪರಂಪರೆ’ಗೌರವ

11:29 AM Dec 08, 2017 | |

ಹೊಸದಿಲ್ಲಿ: ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಭಾರತದ ವಿಶ್ವಪ್ರಸಿದ್ಧ ಕುಂಭಮೇಳ ಇದೀಗ “ಮಾನವತೆಯ ಅವ್ಯಕ್ತ ಸಾಂಸ್ಕೃತಿಕ ಪರಂಪರೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಗೋಚರ ಪರಂಪರೆಯ ಪಟ್ಟಿಗೆ ಕುಂಭಮೇಳವನ್ನೂ ಸೇರಿಸಿರುವುದಾಗಿ ಯುನೆಸ್ಕೋ ಗುರುವಾರ ಘೋಷಿಸಿದೆ.

Advertisement

ದಕ್ಷಿಣ ಕೊರಿಯಾದ ಜೆಜುವಿನಲ್ಲಿ ನಡೆದ ಯುನೆಸ್ಕೋದ 12ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಜಗತ್ತಿನಲ್ಲೇ ಧಾರ್ಮಿಕ ಯಾತ್ರಿಗಳ ಅತಿದೊಡ್ಡ ಸಮಾಗಮ ಎಂದೇ ಪರಿಗಣಿಸಲ್ಪಟ್ಟಿರುವ ಕುಂಭಮೇಳವು ಇದೀಗ ಬೋಟ್ಸ್‌ವಾನಾ, ಕೊಲಂಬಿಯಾ, ವೆನಿಜುವೆಲಾ, ಮಂಗೋ ಲಿಯಾ, ಮೊರೊಕ್ಕೋ, ಟರ್ಕಿ ಹಾಗೂ ಯುಎಇಯಲ್ಲಿ ನಡೆ ಯುವಂಥ ಕಾರ್ಯಕ್ರಮಗಳೊಂದಿಗೆ ಸ್ಥಾನ ಪಡೆದಂತಾಗಿದೆ.  ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ, ಪವಿತ್ರ ಕುಂಭ ಮೇಳಕ್ಕೆ ಅವ್ಯಕ್ತ ಪರಂಪರೆಯ ಗರಿ ಮೂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದಿದ್ದಾರೆ. ಅಲಹಾಬಾದ್‌, ಹರಿದ್ವಾರ, ಉಜ್ಜಯಿನಿ, ನಾಸಿಕ್‌ನಲ್ಲಿ 4 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next