Advertisement

ಚೀನಾ, ಪಾಕ್‌ಗೆ ವಿಶ್ವಸಂಸ್ಥೆ ತಪರಾಕಿ

01:03 AM Aug 24, 2019 | mahesh |

ನ್ಯೂಯಾರ್ಕ್‌: ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಇತ್ತೀಚೆಗೆ ಮುಖಭಂಗ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಈಗ ವಿಶ್ವಸಂಸ್ಥೆಯೇ ಚಾಟಿ ಬೀಸಿದೆ. ಪಾಕಿಸ್ತಾನ ಹಾಗೂ ಚೀನಾದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಗುರುವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಆರೋಪಿಸಲಾಗಿದೆ. ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳು ಈ ಕುರಿತು ಆಕ್ಷೇಪ ಎತ್ತಿವೆ.

Advertisement

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪ್ರಸ್ತುತ ಅಧ್ಯಕ್ಷೀಯ ದೇಶವಾಗಿರುವ ಪೋಲೆಂಡ್‌, ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆ ಕುರಿತಾದ ಸಭೆ ನಡೆಸಿತ್ತು. ಇದರಲ್ಲಿ ಮಾತನಾಡಿದ ಅಮೆರಿಕದ ರಾಯಭಾರಿ ಸ್ಯಾಮುಯೆಲ್ ಬ್ರೌನ್‌ಬ್ಯಾಕ್‌, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಿಂಸೆಯನ್ನು ಅನುಭವಿಸುತ್ತಲೇ ಇದ್ದಾರೆ. ಕ್ರಿಶ್ಚಿಯನ್ನರು, ಅಹಮದೀಯರು, ಉಯಿಗುರ್‌, ಹಿಂದೂಗಳು ಸೇರಿದಂತೆ ಇತರ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಹಾಗೂ ಚೀನಾದಲ್ಲಿ ಹತ್ತಿಕ್ಕಲಾಗುತ್ತಿದೆ. ಇದಕ್ಕೆ ಸರ್ಕಾರದ ತಾರತಮ್ಯದ ಕಾನೂನುಗಳೂ ಕಾರಣ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನದ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ನವೀದ್‌ ವಾಲ್ಟರ್‌ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next