ಸ್ಪೇನ್: ಕೋವಿಡ್ 19ನಿಂದ ಉಂಟಾಗುವ ಆರ್ಥಿಕ ಕುಸಿತವನ್ನು ಎದುರಿಸಲು ಸರಕಾರವು ಸಾರ್ವತ್ರಿಕ ಮೂಲ ಆದಾಯದ ಪ್ರಾಥಮಿಕ ಆವೃತ್ತಿಯನ್ನು ಪರಿಚಯಿಸಲು ನಿರ್ಧರಿಸಿದೆ.
ಉಪ ಪ್ರಧಾನಿ ಪ್ಯಾಬೋ ಇಗ್ನೇಷಿಯಸ್ ಅವರು, “ ಕೋವಿಡ್ -19 ನಿಂದ ಸೃಷ್ಟಿಯಾಗಬಹುದಾದ ಬಿಕ್ಕಟ್ಟಿನಿಂದ ಹೊರಬರಲು ಮೂಲ ಆದಾಯ ಯೋಜನೆ ಸಹಾಯವಾಗಬಹುದು. ಇದರಿಂದ ಸ್ಥಳೀಯರಿಗೆ ಘನತೆ ಮತ್ತು ಕನಿಷ್ಠ ಖರೀದಿ ಬಲವನ್ನು ಖಾತರಿಪಡಿಸಲಿದೆ ಎಂದು ಶುಕ್ರವಾರ ಸಂದರ್ಶನವೊಂದರಲ್ಲಿ ಹೇಳಿದರು.
ಇದು ದೇಶಾದ್ಯಂತ ಜಾರಿಗೊಳ್ಳಲಿದ್ದು, ಹತಾಶ ಸ್ಥಿತಿಯಲ್ಲಿರುವ ಜನರಿಗೆ ಈಗ ಸಹಕಾರದ ಅಗತ್ಯವಿದೆ. ಈ ಸಾರ್ವತ್ರಿಕ ಮೂಲ ಆದಾಯ ವ್ಯವಸ್ಥೆಯನ್ನು ಜಾರಿಗೆ ತರಲು ಕೆಲವು ತಿಂಗಳು ತೆಗೆದುಕೊಳ್ಳಬಹುದು ಎಂದರು.
ಮಾಧ್ಯಮಗಳ ವರದಿ ಪ್ರಕಾರ ಈ ಆದಾಯ ತಿಂಗಳಿಗೆ 550 ಡಾಲರ್‌ಗಳಾಗಿರಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಖರೀದಿಯಲ್ಲಿರುವ ಕುಟುಂಬಗಳಿಗೆ ಇದು ಸಹಾಯಕವಾಗುತ್ತದೆ ಎಂದರು.
ಸ್ಪೇನ್ ಸರಕಾರವು ಈಗಾಗಲೇ 200 ಬಿಲಿಯನ್ ನೆರವು ಘೋಷಿಸಿದ್ದು, ಇದು ಜಿಡಿಪಿಯ ಶೇ.20ರಷ್ಟಿದೆ. ಕೋವಿಡ್ 19ನಿಂದ ಉಂಟಾಗಿರುವ ಆರ್ಥಿಕ ಪರಿಣಾಮವನ್ನು ನಿಭಾಯಿಸುತ್ತದೆ.
ಸ್ಪ್ಯಾನಿಷ್ ಕಾರ್ಮಿಕ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಲ್ಲಿ ರಾಷ್ಟ್ರವು 3,02,265 ಜನರು ನಿರುದ್ಯೋಗಿಳಾಗಿದ್ದಾರೆ.