Advertisement

ಅಮೆರಿಕದಲ್ಲಿ ನಿರುದ್ಯೋಗ ಶೇ.25 ಹೆಚ್ಚಳ

11:26 AM May 20, 2020 | sudhir |

ವಾಷಿಂಗ್ಟನ್‌: ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆಯ ಗಂಭೀರವಾಗಿದ್ದು,  ಶೇ. 25ರಷ್ಟು ಹೆಚ್ಚಳ ಕಂಡಿದೆ. 1930ರ ಮಹಾ ಆರ್ಥಿಕ ಕುಸಿತದ ಬಳಿಕದ ಅತಿದೊಡ್ಡ ನಿರುದ್ಯೋಗ ದರವಿದು.ನಿರುದ್ಯೋಗ ಭತ್ಯೆ ಅರ್ಜಿಗಳನ್ನು ವಿಲೇವಾರಿ ಮಾಡಲು ರಾಜಕೀಯ ನಾಯಕರ ಮೇಲೆ ತೀವ್ರ ಒತ್ತಡ ಬಿದ್ದಿದೆ. ನಿರುದ್ಯೋಗ ಭತ್ಯೆ ಪಡೆಯ ಬಯಸಿ ದಾಖಲೆ ಪ್ರಮಾಣದ 3 ಕೋಟಿಗೂ ಅಧಿಕ ಅರ್ಜಿಗಳು ಬಂದಿವೆ.

Advertisement

ಸೋಂಕು ಪ್ರಾರಂಭವಾದಂದಿನಿಂದ ಎ. 30ರವರೆಗೆ 3.8 ಕೋಟಿ ನಿರುದ್ಯೋಗಿಗಳು ನಿರುದ್ಯೋಗ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಮಸ್ಯೆ ದೀರ್ಘಾವಧಿಗೆ ಕಾಡಲಿದೆ ಎಂದು ಜಾಗತಿಕ ಆರ್ಥಿಕ ವರದಿ ತಿಳಿಸಿದೆ. ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೋಮ್‌ ಪೊವೆಲ್‌ ನಿರುದ್ಯೋಗ ದರ ಶೇ.25 ಹೆಚ್ಚಾಗಲಿದೆ ಎಂದಿದ್ದಾರೆ.

ಜೂನ್‌ ತ್ತೈಮಾಸಿಕದಲ್ಲಿ ಜಿಡಿಪಿ ದರ ಇನ್ನಷ್ಟು ಕುಸಿಯಲಿದ್ದು, ಪರಿಣಾವಾಗಿ ಮೇ ಮತ್ತು ಜೂನ್‌ನಲ್ಲಿ ಇನ್ನೂ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಪೊವೆಲ್‌ ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next