Advertisement
ಕಳೆದ ಒಂದೇ ವಾರ 21 ಲಕ್ಷ ಜನರು ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ಕೋವಿಡ್‌ನಿಂದಾಗಿ 10 ವಾರಗಳಲ್ಲಿ ಸುಮಾರು 4 ಕೋಟಿಯಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ 20 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದ್ದು, ರಾಷ್ಟ್ರದ ನಿರುದ್ಯೋಗ ದರ ಶೇ.14.7 ರಷ್ಟಕ್ಕೆ ಏರಿತ್ತು. ಇದರ ಪ್ರಮಾಣ ಮಾರ್ಚ್‌ನಲ್ಲಿ ಶೇ.4.4ರಷ್ಟಿತ್ತು. ಮೇ ಮೊದಲ 2 ವಾರದಲ್ಲಿ ಸುಮಾರು 21 ಲಕ್ಷ ಜನರು ಹೊಸದಾಗಿ ನಿರುದ್ಯೋಗ ಭತ್ಯೆ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ನಿರುದ್ಯೋಗಿಗಳ ಸಂಖ್ಯೆ 4 ಕೋಟಿಯ ಗಡಿ ದಾಟಿದೆ.
Advertisement
ಕೋವಿಡ್‌ಗಿಂತ ನಿರುದ್ಯೋಗವೇ ದೊಡ್ಡ ಸಮಸ್ಯೆ
02:31 PM Jun 01, 2020 | mahesh |
Advertisement
Udayavani is now on Telegram. Click here to join our channel and stay updated with the latest news.