Advertisement

ಭಾರತದ ನಿರುದ್ಯೋಗ ಸೂಚ್ಯಂಕ ಶೇ.8.5 ರಷ್ಟು ಏರಿಕೆ

08:11 AM Nov 02, 2019 | Hari Prasad |

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ನಿರುದ್ಯೋಗ ಸೂಚ್ಯಂಕದ ದರ ಏರಿಕೆಯಾಗಿದ್ದು, ದಾಖಲೆ ಮಟ್ಟದದಲ್ಲಿ ಬದಲಾಗಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (CMIE) ಸಂಸ್ಥೆ ತಿಳಿಸಿದೆ.

Advertisement

ಕಳೆದ ತಿಂಗಳಿನಲ್ಲಿ ನಿರುದ್ಯೋಗ ಸೂಚ್ಯಂಕ ದರ ಶೇ.8.5ರಷ್ಟಕ್ಕೆ ಏರಿದ್ದು, ಸೆಪ್ಟೆಂಬರ್‌ ತಿಂಗಳಿನಲ್ಲಿ ಶೇ.7.2ರಷ್ಟು ದಾಖಲಾಗಿತ್ತು. 2016 ರ ನಂತರದ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿರುದ್ಯೋಗ ಸ್ಯೂಚಂಕದಲ್ಲಿ ಏರಿಕೆ ಕಂಡು ಬಂದಿದ್ದು, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳ ಅಂತರದಲ್ಲಿ ಶೇ.1.3 ರಷ್ಟು ಏರಿಕೆಯಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಈ ಬೆಳವಣಿಗೆ ಆರ್ಥಿಕತೆ ಕ್ಷೇತ್ರದಲ್ಲಿ ಮಂದಗತಿಯನ್ನು ಸೂಚಿಸುತ್ತಿದ್ದು, ಭಾರತದ ಮೂಲಸೌಕರ್ಯ ಉತ್ಪಾದನೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಶೇ.5.2 ರಷ್ಟು ಕುಸಿದಿದೆ. ಇತ್ತೀಚಿನ ಆರ್ಥಿಕ ವರ್ಷಗಳಲ್ಲೇ ಅತ್ಯಂತ ಕಳಪೆ ಮಟ್ಟದ ಸೂಚ್ಯಂಕ ಇದ್ದಾಗಿದ್ದು, ಕಳೆದ ಆರು ವರ್ಷಗಳಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next