Advertisement

ಮಾಜಿ ಭೂಗತ ಪಾತಕಿ ಛೋಟಾ ರಾಜನ್ ಮೃತ ಪಟ್ಟಿಲ್ಲ : ಏಮ್ಸ್

05:16 PM May 07, 2021 | Team Udayavani |

ನವ ದೆಹಲಿ: ದಾವುದ್ ಇಬ್ರಾಹಿಂ ಸಹಚರನಾಗಿದ್ದ ಮಾಜಿ ಭೂಗತ ಪಾತಕಿ ಛೋಟಾ ರಾಜನ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಇಂದು (ಮೇ 7) ಮೃತಪಟ್ಟಿದ್ದಾನೆ ಎಂಬ ವದಂತಿ ಹರಡಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಏಮ್ಸ್ ಆಸ್ಪತ್ರೆ, ಛೋಟಾ ರಾಜನ್ ಇನ್ನೂ ಬದುಕಿದ್ದಾರೆ. ಕೋವಿಡ್ ನಿಂದ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ.

2015ರಲ್ಲಿ ಛೋಟಾ ರಾಜನ್​ ನನ್ನು ಬಂಧಿಸಲಾಗಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಕಾರಾಗೃಹವಾಸ ಅನುಭವಿಸುತ್ತಿದ್ದ ರಾಜನ್ ​ನನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ದೃಢ ಪಟ್ಟಿದ್ದ ಕಾರಣ ಕೆಲವು ದಿನಗಳಿಂದ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದ್ದಾರೂ ಚಿಕಿತ್ಸೆ ಫಲಕಾರಿಯಾಗದೇ ಭೂಗತ ಪಾತಕಿ ಮೃತ ಪಟ್ಟಿದ್ದಾನೆ ಎಂದು ವರದಿಗಳು ಹರಡಿದ್ದವು.

ಓದಿ : ಕೋವಿಡ್ ಮೂರನೇ ಅಲೆಯನ್ನು ಹೊಡೆದುರುಳಿಸಲಿದೆ ಜರ್ಮನ್ :  ಜೆನ್ಸ್ ಸ್ಪಾನ್    

ಇನ್ನು, ಮಾಜಿ ಭೂಗತ ದೊರೆ ಛೋಟಾ ರಾಜನ್ ವಿರುದ್ಧ 68 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 68 ಕ್ರಿಮಿನಲ್ ಪ್ರಕರಣಗಳ ಪೈಕಿ 35 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ​ಶೀಟ್ ಸಲ್ಲಿಸಲಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಛೋಟಾ ರಾಜನ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

Advertisement

ಕರ್ನಾಟಕದ ಮಂಡ್ಯದ ನಕಲಿ ವಿಳಾಸ ನೀಡಿ ಪಾಸ್ ​ಪೋರ್ಟ್ ಪಡೆದಿದ್ದ ಛೋಟಾ ರಾಜನ್ ವಿರುದ್ಧ ಮಂಡ್ಯ ತಹಶೀಲ್ದಾರ್ ದೆಹಲಿ ಕೋರ್ಟ್​ನಲ್ಲಿ ಸಾಕ್ಷ್ಯ ಹೇಳಿದ್ದರು ‌. ಪಾಸ್​ ಪೋರ್ಟ್ ಪ್ರಕರಣದಲ್ಲಿ ಛೋಟಾ ರಾಜನ್ ಅಪರಾಧಿ ಎಂದು ಕೋರ್ಟ್ ತೀರ್ಪು ‌ ನೀಡಿತ್ತು. ತಿಹಾರ್ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ ಛೋಟಾ ರಾಜನ್ ​ನನ್ನು ಇತರ ಕೈದಿಗಳ ಜತೆ ಬೆರೆಯುವುದರಿಂದ ದೂರವಿಡಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಛೋಟಾ ರಾಜನ್ ​ಗೆ ಏಕಾಂತ ಕಾರಾಗೃಹವಾಸ ವಿಧಿಸಲಾಗಿತ್ತು.

ಓದಿ :  ಆದಿವಾಸಿಗಳಿಗೆ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ

Advertisement

Udayavani is now on Telegram. Click here to join our channel and stay updated with the latest news.

Next