Advertisement

ಉತ್ತರ ಕೊರಿಯಾ: ಭೂಗತ ಶಸ್ತ್ರಾಸ್ತ್ರ ತಯಾರಿಕ ಕಾರ್ಖಾನೆ ಪತ್ತೆ

01:19 AM Jul 04, 2022 | Team Udayavani |

ಪಾಂಗೊಂಗ್‌: ಉತ್ತರ ಕೊರಿಯಾದ ಚಗಾಂಗ್‌ ರಾಜ್ಯದ ರಾಜಧಾನಿಯಾದ ಕಾಂಗೈ ನಗರದ ಬಳಿ ನಿರ್ಜನ ಪ್ರದೇಶದಲ್ಲಿ ನೆಲದ ಅಡಿಯಲ್ಲಿ ದೊಡ್ಡ ಶಸ್ತ್ರಾಸ್ತ್ರ ತಯಾರಿಕ ಕಾರ್ಖಾನೆಯೊಂದನ್ನು ಉತ್ತರ ಕೊರಿಯಾ ಸರಕಾರ ನಿರ್ಮಿಸಿದ್ದು, ಹಲವಾರು ದಿನಗಳಿಂದ ಅದು ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ಇದಕ್ಕೆ, “ಕಾಂಗೈ ಜನರಲ್‌ ಟ್ರ್ಯಾಕ್ಟರ್‌ ಪ್ಲಾಂಟ್‌’ ಎಂಬ ಹೆಸರಿದೆ. ಈ ಮೂಲಕ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಮತ್ತೊಂದು ದುಸ್ಸಾಹಸ ಬೆಳಕಿಗೆ ಬಂದಿದೆ.

ಸುಮಾರು 1.2 ಕಿ.ಮೀ. ವ್ಯಾಪ್ತಿಯಲ್ಲಿ ಈ ಶಸ್ತ್ರಾಸ್ತ್ರ ಕಾರ್ಖಾನೆ ಹರಡಿಕೊಂಡಿದ್ದು, ಇದರಲ್ಲಿ 20 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.

ಅವರೆಲ್ಲರೂ ಈ ಕಾರ್ಖಾನೆಯ ಪ್ರವೇಶಕ್ಕಾಗಿಯೇ ಕಾಂಗೈ ನಗರದ ಹೊರವಲಯದಲ್ಲಿ ಕೊರೆಯಲಾಗಿರುವ 4 ಸುರಂಗ ಮಾರ್ಗಗಳ ಮೂಲಕ ಕಾರ್ಖಾನೆಗೆ ತೆರಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next