Advertisement

ಸ್ಮಾರ್ಟ್‌ ಸಿಟಿಯ ಸ್ಮಾರ್ಟ್‌ನೆಸ್‌ ಹೆಚ್ಚಿಸಲು ಭೂಗತ ವಿದ್ಯುತ್‌ ಕೇಬಲ್‌

07:09 PM Jan 24, 2022 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ಪರಿವರ್ತನೆಯಾಗುತ್ತಿರುವ ಮಂಗಳೂರು ನಗರದಲ್ಲಿ ಸ್ಮಾರ್ಟ್‌ ರೋಡ್‌ ನಿರ್ಮಾಣಕ್ಕೆ ಪೂರಕವಾಗಿ ಓವರ್‌ ಹೆಡ್‌ ವಿದ್ಯುತ್‌ ಲೈನ್‌ಗಳನ್ನು ಭೂಗತ ವಿದ್ಯುತ್‌ ಕೇಬಲ್‌ಗೆ
ಬದಲಾಯಿಸುವ ಕಾಮಗಾರಿ ನಡೆಯುತ್ತಿದೆ.

Advertisement

ಕಾರ್‌ಸ್ಟ್ರೀಟ್‌ ಪ್ರದೇಶದಲ್ಲಿ ಈಗಾಗಲೇ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಕಾಮಗಾರಿ ಪೂರ್ಣ
ಗೊಂಡಿದ್ದು, ಇದೀಗ ಮಂಗಳಾದೇವಿ ರಸ್ತೆ, ಮಾರ್ನಮಿಕಟ್ಟೆ, ಮೋರ್ಗನ್ಸ್‌ಗೆàಟ್‌, ರಾಮಕೃಷ್ಣ ಮಠ ರಸ್ತೆ, ನ್ಯೂ ಪಾಂಡೇಶ್ವರ ರೋಡ್‌ ಪರಿಸರದಲ್ಲಿ ಭೂಗತ ಕೇಬಲ್‌ ಹಾಕುವ ಕೆಲಸ ಪ್ರಗತಿಯಲ್ಲಿದೆ. ಮಂಗಳಾದೇವಿ ಸುತ್ತ ಮುತ್ತಲ ಪ್ರದೇಶದಲ್ಲಿ ಸುಮಾರು 4 ಕಿ.ಮೀ. ಭೂಗತ ಕೇಬಲ್‌ ಅಳವಡಿಸಲಾಗುತ್ತಿದೆ. ಮೆಸ್ಕಾಂ ಮೇಲುಸ್ತುವಾರಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ.

ಮಂಗಳೂರು ನಗರದಲ್ಲಿ ಓವರ್‌ ಹೆಡ್‌ ವಿದ್ಯುತ್‌ ತಂತಿಗಳನ್ನು ಭೂಗತ ಕೇಬಲ್‌ಗೆ ಬದಲಾಯಿಸುವ ಕಾಮಗಾರಿ ಮೆಸ್ಕಾಂ ವತಿಯಿಂದ 2017 ರಲ್ಲಿ ಆರಂಭ ವಾಗಿತ್ತು. ಪ್ರಥಮ ಕಾಮಗಾರಿ ಬೆಂದೂರ್‌ವೆಲ್‌ ಜಂಕ್ಷನ್‌ನಿಂದ ಹಂಪನಕಟ್ಟೆ ಮತ್ತು ಎ.ಬಿ. ಶೆಟ್ಟಿ ವೃತ್ತದ ತನಕ ನಡೆದಿತ್ತು. 33 ಕೆ.ವಿ. ಲೈನ್‌ಗೆ ಸಂಬಂಧಿಸಿ ಒಟ್ಟು 32 ಕಿ.ಮೀ. ಭೂಗತ ಕೇಬಲ್‌ ಅನ್ನು ಈಗಾಗಲೇ ಅಳವಡಿಸಲಾಗಿದೆ. ಇದೀಗ ಕುಲಶೇಖರ ಉಪ ಕೇಂದ್ರದಿಂದ ಎಲ್ಲ ಕೇಂದ್ರ ಗಳಿಗೆ ಅಂತರ್‌ ಸಂಪರ್ಕ ಕಲ್ಪಿಸಲಾಗಿದೆ. 11 ಕೆ.ವಿ. ಲೈನ್‌ಗೆ ಸಂಬಂಧಿಸಿ ಕಾರ್‌ಸ್ಟ್ರೀಟ್‌, ಹಂಪನಕಟ್ಟೆ, ಕೆ.ಎಸ್‌. ರಾವ್‌ ರಸ್ತೆ, ನೆಹರೂ ಮೈದಾನ, ಪಾಂಡೇಶ್ವರ, ಬಂದರ್‌ ಪರಿಸರದಲ್ಲಿ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಕೆಲವು ಕಡೆ ನಡೆದಿದೆ ಹಾಗೂ ಇನ್ನೂ ಕೆಲವು ಕಡೆ ಪ್ರಗತಿಯಲ್ಲಿದೆ. ಮಂಗಳಾದೇವಿ ಭಾಗದಲ್ಲಿಯೂ ಕಾಮಗಾರಿ ನಡೆಯುತ್ತಿದೆ.

ಪ್ರಯೋಜನ ಏನು ?
ಭೂಗತ ಕೇಬಲ್‌ ಹಾಕುವುದರಿಂದ ರಸ್ತೆಯ ಬದಿ ಮೇಲ್ಭಾಗದಲ್ಲಿ ವಿದ್ಯುತ್‌ ತಂತಿಗಳು ಜೋತು ಬೀಳುವುದು, ಮಳೆ ಗಾಳಿಗೆ ಮರಗಳು ಬಿದ್ದು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ತಪ್ಪುತ್ತದೆ. ವಿದ್ಯುತ್‌ ಸಂಬಂಧಿತ ಅವಘ‌ಡಗಳೂ ಕಡಿಮೆಯಾಗುತ್ತವೆ. ರಸ್ತೆ ಬದಿ ಅಲ್ಲಲ್ಲಿ ವಿದ್ಯುತ್‌ ಕಂಬಗಳು ಹಾಗೂ ಮೇಲ್ಭಾಗದಲ್ಲಿ ತಂತಿಗಳು ಇಲ್ಲದಾಗುವುದರಿಂದ ರಸ್ತೆಗಳ ಸೌಂದರ್ಯ ಕೂಡ ಹೆಚ್ಚುತ್ತದೆ. ನಗರದ ಸ್ಮಾರ್ಟ್‌ನೆಸ್‌ ವರ್ಧನೆ ಆಗು ತ್ತದೆ. ವಿದ್ಯುತ್‌ ವಿತರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಇದು ಪೂರಕವಾಗಿ ಪರಿಣಮಿಸಲಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಭೂಗತ ಕೇಬಲ್‌ ಅಳವಡಿಸಿದ ರಸ್ತೆಗಳಲ್ಲಿ ಬೀದಿ ದೀಪಗಳಿಗಾಗಿ ಮಾತ್ರ ಕಂಬ ಗಳನ್ನು ಹಾಕಲಾಗುತ್ತಿದೆ. ರಸ್ತೆಗೆ 9 ಮೀ. ಎತ್ತರದಲ್ಲಿ ಹಾಗೂ ಫುಟ್‌ಪಾತ್‌ಗಳಿಗೆ 5 ಮೀ. ಎತ್ತರದಲ್ಲಿ ಬೀದಿ ದೀಪ ಇರುತ್ತದೆ.

Advertisement

ಫೆಬ್ರವರಿ 15ರೊಳಗೆ ಕಾಮಗಾರಿ ಪೂರ್ಣ
ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಪ್ರದೇಶಗಳಲ್ಲಿ ಓವರ್‌ ಹೆಡ್‌ ವಿದ್ಯುತ್‌ ತಂತಿಗಳು ಇರುವುದಿಲ್ಲ. ಇದರಿಂದಾಗಿ ರಸ್ತೆಗಳು ಸ್ಮಾರ್ಟ್‌ ಆಗಿ ಕಾಣಿಸುತ್ತವೆ. ಮಂಗಳಾದೇವಿ ಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಭೂಗತ ಕೇಬಲ್‌ ಹಾಕುವ ಕಾಮಗಾರಿ ಮುಂದಿನ ಫೆಬ್ರವರಿ 15ರೊಳಗೆ ಪೂರ್ತಿಗೊಳ್ಳಲಿದೆ.
– ಅರುಣ್‌ ಪ್ರಭ ಕೆ.ಎಸ್‌.,
ಜನರಲ್‌ ಮ್ಯಾನೇಜರ್‌, ಮಂಗಳೂರು ಸ್ಮಾರ್ಟ್‌ ಸಿಟಿ ಲಿ.

Advertisement

Udayavani is now on Telegram. Click here to join our channel and stay updated with the latest news.

Next