Advertisement
ನಿಷೇಧಿತ ಸಿಪಿಎಂ ನಕ್ಸಲರ ದೇಶಾದ್ಯಂತದ ಭೂಗತ ಜಾಲದ ಬಗ್ಗೆ ಕೇಂದ್ರ ಸರಕಾರಕ್ಕೆ ಗುಪ್ತಚರ ದಳ ವಿಸ್ತೃತ ವರದಿಯನ್ನು ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
Related Articles
Advertisement
ಕಾಶ್ಮೀರ ಕಣಿವೆಯಲ್ಲಿರುವ ವಿವಿಧ ಉಗ್ರ ಸಂಘಟನೆಗಳು ಮತ್ತು ಸಿಪಿಐ ಎಂ ಮಾವೋವಾದಿಗಳ ನಡುವೆ ನಿಕಟ ನಂಟನ್ನು ಬೆಸೆಯುವಲ್ಲಿ ಅನೇಕ ಶಂಕಿತ ನಕ್ಸಲ್ ಸಹಾನುಭೂತಿದಾರರು ಯತ್ನಿಸುತ್ತಿದ್ದಾರೆ ಎಂದು ವರದಿಯು ಹೇಳಿದೆ.
ಕಳೆದ ವರ್ಷ ಸಂಭವಿಸಿದ್ದ ಭೀಮಾ ಕೋರೇಗಾಂವ್ ಹಿಂಸೆಯ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ಕಾಶ್ಮೀರದಲ್ಲಿ ಸಂಗ್ರಹಿಸಿರುವ ಅನೇಕ ಮೂಲಗಳ ಮಾಹಿತಿ ಮತ್ತು ವಶಪಡಿಸಿಕೊಂಡಿರುವ ಪತ್ರದ ಆಧಾರದಲ್ಲಿ ದೇಶಾದ್ಯಂತದ ನಕ್ಸಲ್ ಜಾಲ ಮತ್ತು ಅದರ ಐವರು ಮಾಸ್ಟರ್ ಮೈಂಡ್‌ಗಳು ಕಾರ್ಯಾಚರಿಸುತ್ತಿರುವುದರ ಬಗ್ಗೆ ಗುಪ್ತ ಚರ ದಳ ತನ್ನ ವರದಿಯಲ್ಲಿ ವಿಸ್ತೃತ ಮಾಹಿತಿ ನೀಡಿದೆ.