Advertisement

ಮಂಗಳನ ಅಂಗಳದಲ್ಲಿ ಕೆರೆ

06:00 AM Jul 26, 2018 | |

ತಂಪಾ(ಅಮೆರಿಕ): ಮಂಗಳನ ಅಂಗಳಕ್ಕೆ ಹೋಗುತ್ತೇವೆ ಎಂಬ ಕನಸಿಟ್ಟುಕೊಂಡವರಿಗೆ ಇಲ್ಲೊಂದು ಶುಭ ಸುದ್ದಿ… ಇದೇ ಮೊದಲ ಬಾರಿಗೆ ಮಂಗಳನ ಅಂಗಳದಲ್ಲಿ “ನೀರು ಇರುವ ಕೆರೆ’ ಪತ್ತೆಯಾಗಿದೆ. ಅಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ನೀರು ಇರುವ ಸಾಧ್ಯತೆಗಳಿದ್ದು, ಜೀವಿಗಳೂ ಇರಬಹುದು ಎಂಬ ಆಶಾವಾದವೂ ವ್ಯಕ್ತವಾಗಿದೆ. 

Advertisement

ಮಂಗಳನಲ್ಲಿರುವ ಹಿಮದ ಅಡಿಯಲ್ಲಿರುವ ಈ ಕೆರೆ ಸುಮಾರು 20 ಕಿ.ಮೀ. ಅಗಲದಷ್ಟು ವಿಸ್ತೀರ್ಣಹೊಂದಿದೆ ಎಂದು ಇಟಲಿಯ ಸಂಶೋಧಕರು ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ ಜರ್ನಲ್‌ ಸೈನ್ಸ್‌ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಇದಷ್ಟೇ ಅಲ್ಲ, ಮಂಗಳನಲ್ಲಿ ಜೀವಿಗಳು ಇರಬಹುದು ಎಂಬ ಹುಡುಕಾಟಕ್ಕೂ ಈ ಸಂಶೋಧನೆ ಸಹಾಯಕವಾಗಬಲ್ಲದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. 

ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಮಾರ್ಸ್‌ ಎಕ್ಸ್‌ಪ್ರೆಸ್‌ ಆರ್ಬಿಟರ್‌ನಲ್ಲಿನ ರಾಡಾರ್‌ ಉಪಕರಣದ ಸಹಾಯದಿಂದ ಈ ಶೋಧ ಮಾಡಲಾಗಿದೆ. ಮಂಗಳನಲ್ಲಿ ನೀರು ಇದೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯುವ ಸಲುವಾಗಿ 2003ರಲ್ಲಿ ಈ ಉಪಗ್ರಹ ಹಾರಿಸಲಾಗಿತ್ತು. ಇದೀಗ ಈ ಉಪಕರಣ ನೀರು ಇರುವ ಬಗ್ಗೆ ಮಾಹಿತಿ ನೀಡಿದೆ. ಭೂಮಿಯಲ್ಲಿನ ಅಂಟಾರ್ಟಿಕ್‌ ಮತ್ತು ಗ್ರೀನ್‌ಲ್ಯಾಂಡ್ನ‌ಲ್ಲಿನ ಹಿಮಪದರದ ಕೆಳಗಿರುವ ಕೆರೆಗಳ ರೀತಿ ಮಂಗಳನಲ್ಲೂ ಕೆರೆಗಳಿವೆ ಎಂದು ಈ ರಾಡಾರ್‌ ಹೇಳಿದೆ. 

ಹೇಗಿದೆ ಕೆರೆ? ಭೂಮಿಯಲ್ಲಿ ಇರುವ ರೀತಿಯಲ್ಲಿ ಕೆರೆಗಳು ಇರುವುದಿಲ್ಲ. ಬದಲಾಗಿ 1.5 ಕಿ.ಮೀ. ಆಳದಲ್ಲಿ ಹಿಮದ ಅಡಿಯಲ್ಲಿ ಇರುತ್ತವೆ. ನೀರು ದ್ರವ ರೂಪದಲ್ಲಿದ್ದರೂ, ಕುಡಿಯಲು ಬರುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next