Advertisement

ಅಂತಾರಾಷ್ಟ್ರೀಯ ಸಮುದಾಯದ ಹಾದಿ ತಪ್ಪಿಸಿದ್ದಕ್ಕೆ ಚೀನಕ್ಕೆ ತಕ್ಕ ಶಾಸ್ತಿ; ಟ್ರಂಪ್‌ ಬೆದರಿಕೆ

09:13 AM Apr 16, 2020 | Hari Prasad |

ಕೋವಿಡ್ 19 ವೈರಸ್ ಕುರಿತು ಚೀನ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಈಗ, “ನೀವು ಅಂತಾರಾಷ್ಟ್ರೀಯ ಸಮುದಾಯದ ಹಾದಿ ತಪ್ಪಿಸಿದ್ದಕ್ಕೆ ತಕ್ಕ ಶಾಸ್ತಿ ಎದುರಿಸಲಿದ್ದೀರಿ’ ಎಂಬ ಬೆದರಿಕೆಯನ್ನು ಹಾಕಿದ್ದಾರೆ.

Advertisement

ಶ್ವೇತಭವನದಲ್ಲಿ ಮಂಗಳವಾರ ಕೋವಿಡ್ 19 ವೈರಸ್ ಕುರಿತ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರು, ಚೀನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಟ್ರಂಪ್‌, ಚೀನಗೆ ಯಾವ ರೀತಿ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂಬುದನ್ನು ನಾನು ನಿಮಗೆ ಹೇಳುವುದಿಲ್ಲ. ಅದನ್ನು ಚೀನವೇ ಅರ್ಥ ಮಾಡಿಕೊಳ್ಳಲಿದೆ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ. ಆದರೆ, ಯಾವ ರೀತಿಯಾಗಿ ಚೀನ ವಿರುದ್ಧ ಪ್ರತಿಕಾರ ತೀರಿಸಲಾಗುತ್ತದೆ ಎಂಬ ಬಗ್ಗೆ ಟ್ರಂಪ್‌ ವಿವರ ನೀಡಿಲ್ಲ.

ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ 1,509 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮಂಗಳವಾರದ ವೇಳೆಗೆ ಮೃತರ ಸಂಖ್ಯೆ 24,600ಕ್ಕೇರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 6 ಲಕ್ಷ ತಲುಪಿದೆ. ನ್ಯೂಯಾರ್ಕ್‌ವೊಂದರಲ್ಲೇ ಸಾವಿನ ಸಂಖ್ಯೆ 10 ಸಾವಿರ ದಾಟಿದೆ.

ಲಾಕ್‌ಡೌನ್‌ ಸಡಿಲಿಕೆಗೆ ನ್ಯೂಯಾರ್ಕ್‌ ಗವರ್ನರ್‌ ಒಲವು ವ್ಯಕ್ತಪಡಿಸಿದ್ದರೂ, ನನ್ನ ತೀರ್ಮಾನವೇ ಅಂತಿಮ ಎಂದು ಟ್ರಂಪ್‌ ಹೇಳಿದ್ದಾರೆ. ಜತೆಗೆ, ನನ್ನ ತಂಡದೊಂದಿಗೆ ಮತ್ತು ತಜ್ಞರೊಂದಿಗೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಲಾಕ್‌ಡೌನ್‌ ನಿಂದ ಮುಕ್ತಗೊಳ್ಳುವಂತೆ ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದೇನೆ ಎಂದಿದ್ದಾರೆ.

ಈ ನಡುವೆ, ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಅಮೆರಿಕವು ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ್ದು, ಪ್ರತಿದಿನದ ಸಾವಿನ ಸಂಖ್ಯೆ ಗಮನಿಸಿದರೆ ಕಳೆದೊಂದು ವಾರದಲ್ಲಿ ಗಣನೀಯ ಏರಿಕೆಯೇನೂ ಆಗಿಲ್ಲ. ಇದು ನಾವು ಕೈಗೊಂಡ ಕೆಲವು ನಿರ್ಧಾರಗಳು ಯಶಸ್ವಿಯಾಗಿವೆ ಎಂಬುದರ ಸುಳಿವು ನೀಡಿದೆ ಎಂದೂ ಟ್ರಂಪ್‌ ಹೇಳಿದ್ದಾರೆ.
ಇನ್ನೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆ ಕೂಡ, ನಿರ್ಬಂಧವನ್ನು ಇಷ್ಟು ಬೇಗ ಸಡಿಲಿಕೆ ಮಾಡುವುದರಿಂದ ಎರಡನೇ ಹಂತದ ವ್ಯಾಪಿಸುವಿಕೆ ಆರಂಭವಾಗುವ ಭೀತಿಯಿರುತ್ತದೆ ಎಂದಿದೆ.

Advertisement

ವೇತನಕ್ಕೆ ಕತ್ತರಿ: ಆರ್ಥಿಕ ಬಿಕ್ಕಟ್ಟಿನ ಬಿಸಿ ಅಮೆರಿಕದ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳಾದ ಹಾರ್ವರ್ಡ್‌ ವಿವಿ, ಮಸಾಚ್ಯುಸೆಟ್ಸ್‌ ಇನ್‌ ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮೇಲೂ ತಟ್ಟಿದೆ. ವಿವಿಗಳ ಪ್ರಮುಖ ಹುದ್ದೆಗಳಲ್ಲಿರುವವರಿಗೆ ವೇತನ ಕಡಿತ ಮಾಡಲು ಹಾಗೂ ಹೊಸ ನೇಮಕಕ್ಕೆ ಬ್ರೇಕ್‌ ಹಾಕಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next