Advertisement

Under construction tunnel ಕಾರ್ಮಿಕರ ರಕ್ಷಣೆಗೆ 2 ದಿನ ಬೇಕು;ಕೊಳವೆ ಮೂಲಕ ಆಹಾರ

11:19 PM Nov 13, 2023 | Team Udayavani |

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಚಾರ್‌ಧಾಮ್‌ ಮಾರ್ಗದಲ್ಲಿ ನಿರ್ಮಾಣ ಹಂತದ ಟನಲ್‌ ಕುಸಿದು, ಅದರಡಿ ಸಿಲುಕಿರುವ 40 ಮಂದಿ ಕಾರ್ಮಿಕರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಅವರನ್ನು ಹೊರಗೆ ತರಲು ಇನ್ನೂ ಎರಡು -ಮೂರು ದಿನಗಳು ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಕೊಳವೆಯ ಮೂಲಕ ಆಮ್ಲಜನಕ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.

Advertisement

ಯಮುನೋತ್ರಿ-ಬ್ರಹ್ಮಕಾಲ್‌ ರಾಷ್ಟ್ರೀಯ ಹೆದ್ದಾರಿಯ ಸಿಲ್ಕ್ ಯಾರಾ ಮತ್ತು ದಂಡಲ್‌ಗಾಂವ್‌ ನಡುವೆ ನಿರ್ಮಾಣ ಹಂತದಲ್ಲಿದ್ದ ಟನಲ್‌ನ ಒಂದು ಭಾಗವು ರವಿ ವಾ ರ ಮುಂಜಾನೆ 4 ಗಂಟೆ ಸುಮಾರಿಗೆ ಕುಸಿದಿತ್ತು.

“ಟನಲ್‌ನಡಿ ಸಿಲುಕಿರುವ ಎಲ್ಲ ಕಾರ್ಮಿಕರು ಸುರಕ್ಷಿತ ರಾಗಿದ್ದಾರೆ. ರವಿ ವಾ ರ ರಾತ್ರಿಯಿಂದ ಅವರನ್ನು ನಾವು ಸಂಪರ್ಕಿಸಿ ದ್ದೇವೆ. ಈಗಾಗಲೇ 15-20 ಮೀಟರ್‌ನಷ್ಟು ಕಲ್ಲು-ಮಣ್ಣುಗಳನ್ನು ಹೊರಕ್ಕೆ ತೆಗೆದಿದ್ದೇವೆ. ಈ ಕಾರ್ಯ ಮುಂದುವರಿದಿದೆ’ ಎಂದು ಉತ್ತರಾಖಂಡ ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next