Advertisement
ಕಿರು ಇತಿಹಾಸವುಳ್ಳ ಈ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಡುವ ಅವಕಾಶ 22ರ ಹರೆಯದ ರವೀಂದರ್ ಮುಂದಿತ್ತು. 1-0 ಮುನ್ನಡೆಯನ್ನೂ ಸಾಧಿಸಿದ್ದರು. ಈ ನಡುವೆ ಮೂಗಿನಿಂದ ರಕ್ತ ಸುರಿದ ಕಾರಣ ಜೊಲೊªಶ್‌ಬೆಕೋವ್ ವೈದ್ಯಕೀಯ ವಿರಾಮ ಪಡೆದರು. ಮರಳಿ ಅಖಾಡಕ್ಕಿಳಿಯುವಾಗ ಅವರು ಹೆಚ್ಚು ಬಲಶಾಲಿಯಾಗಿ ಗೋಚರಿಸಿದರು. ರವೀಂದರ್ ಆಟ ನಡೆಯಲಿಲ್ಲ.
ದೇಶದ ಕುಸ್ತಿ ಕೇಂದ್ರವಾದ ಸೋನೆಪತ್‌ನವರಾದ ರವೀಂದರ್ ಅವರ ಉಜ್ವಲ ಭವಿಷ್ಯಕ್ಕೆ ಈ ಕೂಟ ದಾರಿದೀಪವಾಗಿದೆ. ಬಲ ಮೊಣಕಾಲಿಗೆ 2 ಸಲ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ ರವೀಂದರ್ ಈ ಹಂತದ ತನಕ ಸಾಗಿ ಬಂದದ್ದೇ ಒಂದು ಅದ್ಭುತ. ರಾಷ್ಟ್ರೀಯ ಅಂಡರ್-23 ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಅವರು ಅಂಡರ್-23 ವಿಶ್ವ ಕುಸ್ತಿಯಲ್ಲಿ ಸ್ಪರ್ಧಿಸುವ ಅರ್ಹತೆ ಸಂಪಾದಿಸಿದರು. ರಾಷ್ಟ್ರೀಯ ಸ್ಪರ್ಧೆ ಮಹಾರಾಷ್ಟ್ರದ ಶಿರ್ಡಿಯಲ್ಲಿ ನಡೆದಿತ್ತು. ಡಿಸೆಂಬರ್‌ನಲ್ಲಿ 2ನೇ ಸಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಆಗಿನ್ನೂ ಚೇತರಿಸಿಕೊಳ್ಳುತ್ತಿದ್ದರಷ್ಟೇ. ಸರ್ವೀಸಸ್ ತಂಡವನ್ನು ಅವರು ಪ್ರತಿನಿಧಿಸುವುದು ಇನ್ನೂ ಪಕ್ಕಾ ಆಗಿರಲಿಲ್ಲ. ಆದರೆ ತಂಡದ ಆಟಗಾರನೋರ್ವ ಹೊರಗುಳಿದ ಕಾರಣ ರವೀಂದರ್‌ಗೆ ಬಾಗಿಲು ತೆರೆಯಿತು. ಮುಂದಿನದು ಇತಿಹಾಸ.
Related Articles
Advertisement