Advertisement

ಅಂಡರ್‌-20 ಫ‌ುಟ್‌ಬಾಲ್‌: ಸ್ಪೇನ್‌ಗೆ  ಭಾರತ ತಂಡ

06:00 AM Jul 21, 2018 | Team Udayavani |

ಹೊಸದಿಲ್ಲಿ: “ಕೊಟಿಫ್ ಇಂಟರ್‌ನ್ಯಾಶನಲ್‌ ಸಿರೀಸ್‌’ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತದ 25 ಸದಸ್ಯರ ಅಂಡರ್‌-20 ಫ‌ುಟ್‌ಬಾಲ್‌ ತಂಡ ಶನಿವಾರ ಫ್ರಾನ್ಸ್‌ ನ ವೆಲೆನ್ಸಿಯಾಗೆ ಪ್ರಯಾಣ ಬೆಳೆಸಲಿದೆ. ಜು. 29ರಿಂದ ಆ. 5ರ ಅವಧಿಯಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನು ಆಡಲಿದೆ.

Advertisement

ಕಳೆದ ವರ್ಷದ ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಆಡಿದ ಹಾಗೂ ಅಂಡರ್‌-19 ತಂಡದ ಆಟಗಾರರನ್ನು ಈ ತಂಡ ಒಳಗೊಂಡಿದೆ. ಮಿಡ್‌ಫಿಲ್ಡರ್‌ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಜಶನ್‌ದೀಪ್‌ ಸಿಂಗ್‌ ಈ ತಂಡದ ಪ್ರಮುಖ ಆಟಗಾರರು.

“ಕೊಟಿಫ್’ ಸರಣಿಗೂ ಮುನ್ನ ಜು. 23 ಮತ್ತು 25ರಂದು ಸ್ಥಳೀಯ ಕ್ಲಬ್‌ ತಂಡಗಳ ವಿರುದ್ಧ ಭಾರತ 2 ಫ್ರೆಂಡ್ಲಿ ಮ್ಯಾಚ್‌ ಆಡಲಿದೆ. ಬಳಿಕ ಮುರ್ಸಿ (ಜು. 29), ಮೌರಿಟಾನಿಯ (ಜು. 31), ವೆನಿಜುವೆಲಾ (ಆ. 3) ಮತ್ತು ಆರ್ಜೆಂಟೀನಾ ಅಂಡರ್‌-20 ತಂಡಗಳ ವಿರುದ್ಧ ಆಡಲಿದೆ. ಫ್ಲಾಯ್ಡ ಪಿಂಟೊ ಭಾರತ ತಂಡದ ಪ್ರಧಾನ ಕೋಚ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next