Advertisement

Under-19 ವಿಶ್ವಕಪ್‌: ಸೆಮಿಫೈನಲ್‌ ಪ್ರವೇಶಿಸಿದ ಭಾರತ

12:03 AM Feb 03, 2024 | Team Udayavani |

ಬ್ಲೋಮ್‌ಫಾಂಟೀನ್‌: ತನ್ನ ದ್ವಿತೀಯ ಹಾಗೂ ಕಡೆಯ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ನೇಪಾಲವನ್ನು 132 ರನ್ನುಗಳಿಂದ ಸೋಲಿಸಿದ ಭಾರತ, ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಾಯಕ ಉದಯ್‌ ಸಹಾರಣ್‌ ಮತ್ತು ಸಚಿನ್‌ ದಾಸ್‌ ಅವರ ಶತಕ ಸಾಹಸದಿಂದ 5 ವಿಕೆಟಿಗೆ 297 ರನ್‌ ರಾಶಿ ಹಾಕಿತು. ಜವಾಬಿತ್ತ ನೇಪಾಲ 9 ವಿಕೆಟಿಗೆ 165 ರನ್‌ ಮಾಡಿತು.

ಉದಯ್‌ ಸಹಾರಣ್‌ 107 ಎಸೆತಗಳಿಂದ 100 ರನ್‌ ಮಾಡಿದರೆ (9 ಬೌಂಡರಿ), ಸಚಿನ್‌ ದಾಸ್‌ 101 ಎಸೆತ ಎದುರಿಸಿ 116 ರನ್‌ ಬಾರಿಸಿದರು. ಈ ಆಕ್ರಮಣಕಾರಿ ಆಟದಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್‌ ಸೇರಿತ್ತು. ಇವರಿಬ್ಬರು 4ನೇ ವಿಕೆಟಿಗೆ 202 ಎಸೆತಗಳಿಂದ 215 ರನ್‌ ಪೇರಿಸಿ ನೂತನ ದಾಖಲೆ ಸ್ಥಾಪಿಸಿದರು. ಇವರಿಬ್ಬರ ಬ್ಯಾಟಿಂಗ್‌ ಸಾಹಸದೊಂದಿಗೆ ಭಾರತ ಈ ಕೂಟದಲ್ಲಿ 5 ಶತಕ ಬಾರಿಸಿದಂತಾಯಿತು.

ಆರಂಭಿಕರಾದ ಆದರ್ಶ್‌ ಸಿಂಗ್‌ 21 ಮತ್ತು ಅರ್ಶಿನ್‌ ಕುಲಕರ್ಣಿ 18, ಪ್ರಿಯಾಂಶು ಮೋಲಿಯ 19 ರನ್‌ ಮಾಡಿ ಬೇಗನೇ ಔಟಾದರು. 62 ರನ್ನಿಗೆ 3 ವಿಕೆಟ್‌ ಬಿತ್ತು. ಮುಂದಿನದು ಸಹಾರಣ್‌-ದಾಸ್‌ ಜೋಡಿಯ ಸಾಹಸ. ಅವಳಿ ಶತಕಗಳ ಹೀರೋ ಮುಶೀರ್‌ ಖಾನ್‌ ಕೆಳ ಕ್ರಮಾಂಕದಲ್ಲಿ ಆಡಲಿಳಿದು ಔಟಾಗದೆ 9 ರನ್‌ ಮಾಡಿದರು.

ನೇಪಾಲದ ಅಂತಿಮ ವಿಕೆಟ್‌ ಜೋಡಿಯಾದ ಆಕಾಶ್‌ ಚಾಂದ್‌ ಮತ್ತು ದುಗೇìಶ್‌ ಗುಪ್ತಾ ಅವರನ್ನು ಬೇರ್ಪಡಿಸಲು ಭಾರತದಿಂದಾಗಲಿಲ್ಲ. ಇವರು 11.3 ಓವರ್‌ಗಳ ಜತೆಯಾಟ ನಡೆಸಿದರು. 29ಕ್ಕೆ 4 ವಿಕೆಟ್‌ ಉರುಳಿಸಿದ ಸೌಮ್ಯ ಪಾಂಡೆ ಭಾರತದ ಯಶಸ್ವಿ ಬೌಲರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next