Advertisement
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 8 ವಿಕೆಟಿಗೆ 211 ರನ್ ಮಾಡಿದರೆ, ಬಾಂಗ್ಲಾದೇಶ 44.1 ಓವರ್‌ಗಳಲ್ಲಿ 4 ವಿಕೆಟಿಗೆ 215 ರನ್ ಬಾರಿಸಿತು. ಇದು ಬಾಂಗ್ಲಾ ಕಾಣುತ್ತಿರುವ ಮೊದಲ ಫೈನಲ್ ಎಂಬುದು ವಿಶೇಷ.
ವನ್‌ಡೌನ್ ಬ್ಯಾಟ್ಸ್‌ಮನ್ ಮೊಹಮ್ಮದ್ ಹಸನ್ ಜಾಯ್ ಅವರ ಆಕರ್ಷಕ ಶತಕ ಬಾಂಗ್ಲಾ ಸರದಿಯ ವಿಶೇಷವಾಗಿತ್ತು. ಆರಂಭಿಕರಿಬ್ಬರು 32 ರನ್ ಆಗುವಷ್ಟರಲ್ಲಿ ವಾಪಸಾದಾಗ ಹಸನ್ ಜಾಯ್ ತಂಡದ ರಕ್ಷಣೆಗೆ ನಿಂತರು. 127 ಎಸೆತಗಳಿಂದ ಭರ್ತಿ 100 ರನ್ ಮಾಡಿ ಮೆರೆದರು (13 ಬೌಂಡರಿ). ತೌಹಿದ್ ಹೃದಯ್ ಮತ್ತು ಶಹಾದತ್ ಹೊಸೈನ್ ತಲಾ 40 ರನ್ ಮಾಡಿದರು. ಕಿವೀಸ್‌ಗೆ ಕಡಿವಾಣ
ನಿಖರ ಬೌಲಿಂಗ್ ದಾಳಿ ಸಂಘಟಿಸಿದ ಬಾಂಗ್ಲಾದೇಶ ಆರಂಭದಿಂದಲೇ ಕಿವೀಸ್‌ಗೆ ಕಡಿವಾಣ ಹಾಕುತ್ತ ಹೋಯಿತು. ಮಧ್ಯಮ ಕ್ರಮಾಂಕದ ಆಟಗಾರರಾದ ನಿಕೋಲಸ್ ಲಿಡ್‌ಸ್ಟೋನ್ ಮತ್ತು ಬೇಕ್‌ಹ್ಯಾಮ್ ವೀಲರ್ ಗ್ರೀನಲ್ ಅವರ ಹೋರಾಟದ ಫಲದಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು. ಗ್ರೀನಲ್ 83 ಎಸೆತ ಎದುರಿಸಿ ಸರ್ವಾಧಿಕ 75 ರನ್ ಹೊಡೆದರು (5 ಬೌಂಡರಿ, 2 ಸಿಕ್ಸರ್). ಲಿಡ್ಲ್ಸ್ಟೋನ್ ಗಳಿಕೆ 44 ರನ್. ಇದಕ್ಕಾಗಿ ಅವರು 74 ಎಸೆತ ಎದುರಿಸಿದರು. ಹೊಡೆದದ್ದು ಎರಡೇ ಬೌಂಡರಿ.
Related Articles
ನ್ಯೂಜಿಲ್ಯಾಂಡ್-8 ವಿಕೆಟಿಗೆ 211 (ಗ್ರೀನಲ್ 75, ಲಿಡ್ಲ್ಸ್ಟೋನ್ 44, ವೈಟ್ 18, ಶರೀಫುಲ್ಲ 45ಕ್ಕೆ 3, ಶಮೀಮ್ 31ಕ್ಕೆ 2, ಮುರಾದ್ 34ಕ್ಕೆ 2). ಬಾಂಗ್ಲಾದೇಶ-44.1 ಓವರ್‌ಗಳಲ್ಲಿ 4 ವಿಕೆಟಿಗೆ 215 (ಹಸನ್ ಜಾಯ್ 100, ತೌಹಿದ್ 40, ಶಹಾದತ್ ಔಟಾಗದೆ 40).
Advertisement