ಬಸೆಟರ್ (ಸೇಂಟ್ ಕಿಟ್ಸ್): ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಸತತ ಎರಡನೇ ಗೆಲುವು ದಾಖಲಿಸಿದೆ. “ಬಿ’ ವಿಭಾಗದ ಪಂದ್ಯದಲ್ಲಿ ಅದು ಕೆನಡಾವನ್ನು 106 ರನ್ನುಗಳಿಂದ ಮಣಿಸಿತು.
ಕಳೆದ ರಾತ್ರಿಯ ಉಳಿದೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ಗೆಲುವಿನ ಸಂಭ್ರಮ ಆಚರಿಸಿದವು.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 7 ವಿಕೆಟಿಗೆ 320 ರನ್ ಪೇರಿಸಿದರೆ, ಕೆನಡಾ 48.1 ಓವರ್‌ಗಳಲ್ಲಿ 214ಕ್ಕೆ ಆಲೌಟ್ ಆಯಿತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು ಮಣಿಸಿತ್ತು.
ಭಾರತದ ವಿರುದ್ಧ ಎಡವಿದ ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಸೆಣಸಾಟದಲ್ಲಿ ಉಗಾಂಡವನ್ನು 121 ರನ್ನುಗಳಿಂದ ಪರಾಭವಗೊಳಿಸಿತು. ದಕ್ಷಿಣ ಆಫ್ರಿಕಾ 9ಕ್ಕೆ 231 ರನ್ ಗಳಿಸಿತು. ಜವಾಬಿತ್ತ ಉಗಾಂಡ 33.4 ಓವರ್‌ಗಳಲ್ಲಿ 110ಕ್ಕೆ ಉದುರಿತು.
ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್
ದಿನದ ಇನ್ನೊಂದು ಪಂದ್ಯದಲ್ಲಿ ಅಫ್ಘಾನಿಸ್ಥಾನ 135 ರನ್ನುಗಳಿಂದ ಪಪುವಾ ನ್ಯೂ ಗಿನಿಯನ್ನು ಸೋಲಿಸಿತು. ಇದು ಸಣ್ಣ ಮೊತ್ತದ ಸಪರ್ಧೆಯಾಗಿತ್ತು. ಅಫ್ಘಾನ್ 200 ರನ್ನಿಗೆ ಆಲೌಟಾದರೆ, ಪಪುವಾ ನ್ಯೂ ಗಿನಿ 65 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.