Advertisement

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಭಾರತ-ಆಸೀಸ್‌ ಕ್ವಾ. ಫೈನಲ್‌ ಕಾದಾಟ

12:50 AM Jan 26, 2020 | Sriram |

ಪೊಚೆಫ್ಸೂಮ್‌: ಹಾಲಿ ಚಾಂಪಿಯನ್‌ ಹಾಗೂ ಲೀಗ್‌ ಹಂತದ ಅಜೇಯ ತಂಡವಾಗಿರುವ ಭಾರತ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ಸೂಪರ್‌ ಲೀಗ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸ ಲಿದೆ. ಈ ಮುಖಾಮುಖೀ ಮಂಗಳವಾರ ಪೊಚೆಫ್ಸೂóಮ್‌ನಲ್ಲಿ ನಡೆಯಲಿದೆ.

Advertisement

“ಎ’ ವಿಭಾಗದಲ್ಲಿದ್ದ ಪ್ರಿಯಂ ಗರ್ಗ್‌ ಸಾರಥ್ಯದ ಭಾರತ ಆಡಿದ ಮೂರೂ ಲೀಗ್‌ ಪಂದ್ಯಗಳಲ್ಲಿ ಅಧಿಕಾರಯತ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯ “ಬಿ’ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಎರಡನ್ನು ಗೆದ್ದ ಕಾಂಗರೂ ಪಡೆ, ವೆಸ್ಟ್‌ ಇಂಡೀಸಿಗೆ ಶರಣಾಗಿತ್ತು.

ಭಾರತದಂತೆ ಲೀಗ್‌ ಹಂತದ ಎಲ್ಲ 3 ಪಂದ್ಯಗಳನ್ನು ಗೆದ್ದ ವೆಸ್ಟ್‌ ಇಂಡೀಸ್‌ ಬುಧವಾರದ ಕ್ವಾರ್ಟರ್‌ ಫೈನಲ್‌ನಲ್ಲಿ “ಎ’ ವಿಭಾಗದ ದ್ವಿತೀಯ ಸ್ಥಾನಿಯಾದ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.

ಬಾಂಗ್ಲಾಕ್ಕೆ ರನ್‌ರೇಟ್‌ ಲಾಭ
“ಸಿ’ ವಿಭಾಗದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ತಲಾ 5 ಅಂಕ ಪಡೆದವು. ಆದರೆ ರನ್‌ರೇಟ್‌ನಲ್ಲಿ ಮುಂದಿದ್ದ ಬಾಂಗ್ಲಾಕ್ಕೆ ಅಗ್ರಸ್ಥಾನದ ಗೌರವ ಲಭಿಸಿತು. ಗುರುವಾರದ 3ನೇ ಕ್ವಾ.ಫೈನಲ್‌ನಲ್ಲಿ ಬಾಂಗ್ಲಾ ಆತಿಥೇಯ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿ ಸಬೇಕಿದೆ. ಶನಿವಾರದ ಅತ್ಯಂತ ಮಹತ್ವದ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 23 ರನ್ನುಗಳಿಂದ ಯುಎಇಯನ್ನು ಮಣಿಸಿ ಕ್ವಾರ್ಟರ್‌ ಫೈನಲಿಗೆ ಏರಿತು.
ಶುಕ್ರವಾರ 4ನೇ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಇಲ್ಲಿ ಅಫ್ಘಾನಿಸ್ಥಾನ- ಪಾಕ್‌ ಮುಖಾಮುಖೀಯಾಗಲಿವೆ. ಅಫ್ಘಾನ್‌ 5 ಅಂಕ ಪಡೆದು “ಡಿ’ ವಿಭಾಗದ ಅಗ್ರಸ್ಥಾನಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next