Advertisement

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

10:17 AM Jan 20, 2022 | Team Udayavani |

ಟ್ರಿನಿಡಾಡ್: ಕೋವಿಡ್ ಕಾರಣದಿಂದ ನಾಯಕ ಸೇರಿ ತಂಡದ ಹಲವು ಆಟಗಾರರು ಪಂದ್ಯಕ್ಕೆ ಅಲಭ್ಯರಾದರೂ, ಅಂಡರ್ 19 ವಿಶ್ವಕಪ್ ನ ಎರಡನೇ ಪಂದ್ಯದಲ್ಲೂ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.

Advertisement

ಸಾಂಘಿಕ ಹೋರಾಟ ನಡೆಸಿದ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ 174 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ.

ನಾಯಕ ಯಶ್ ಧುಲ್ ಗೆ ಕೋವಿಡ್ ಪಾಸಿಟಿವ್ ಆದ ಕಾರಣ ನಿಶಾಂತ್ ಸಿಂಧು ತಂಡದ ನಾಯಕತ್ವ ವಹಿಸಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 307 ರನ್ ಗಳಿಸಿತು. ರಘುವಂಶಿ 79 ರನ್, ಹರ್ನೂರ್ ಸಿಂಗ್ 88 ರನ್, ರಾಜಾ ಬಾವ 72 ರನ್, ರಾಜವರ್ಧನ್ 39 ರನ್ ಗಳಿಸಿ ತಂಡಕ್ಕೆ ನೆರವಾದರು.

ಇದನ್ನೂ ಓದಿ:ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಮಹಿಳೆಯ ಡ್ಯಾನ್ಸ್‌!-ವಿಡಿಯೋ ವೈರಲ್‌ 

ಗುರಿ ಬೆನ್ನತ್ತಿದ ಐರ್ಲೆಂಡ್ ಸತತ ವಿಕೆಟ್ ಕಳೆದುಕೊಂಡಿತು. 32 ರನ್ ಗಳಿಸಿದ ಸ್ಕಾಟ್ ಮೆಕ್ ಬೆತ್ ಹೆಚ್ಚಿನ ರನ್ ಗಳಿಸಿದವರು. ಭಾರತದ ಬೌಲಿಂಗ್ ದಾಳಿಗೆ ನಲುಗಿದ ಐರ್ಲೆಂಡ್ ತಂಡ ಕೇವಲ 133 ರನ್ ಗೆ ಆಲೌಟಾಯಿತು. ಭಾರತದ ಪರ ಗರ್ವ್ ಸಂಗ್ವಾನ್, ಅನೀಶ್ ಗೌತಮ್, ಕೌಶಲ್ ತಾಂಬೆ ತಲಾ ಎರಡು ವಿಕೆಟ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next