ನಾಗ್ಪುರ: ಸೌರಭ್ ಸಿಂಗ್ ಅವರ ಸೊಗಸಾದ ಶತಕದಿಂದಾಗಿ ಭಾರತೀಯ ಅಂಡರ್-19 ತಂಡವು ಅಂಡರ್-19 ಯೂತ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಯಶಸ್ವಿಯಾಗಿದೆ.
ಈಗಾಗಲೇ ಮೂರು ದಿನಗಳ ಆಟ ಮುಗಿದಿದ್ದು ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳು ವುದು ಖಚಿತವಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದು 34 ರನ್ ಗಳಿಸಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಇಂಗ್ಲೆಂಡ್ ದಿನಪೂರ್ತಿ ಬ್ಯಾಟಿಂಗ್ ತಾಲೀಮ್ ನಡೆಸುವ ಸಾಧ್ಯತೆಯಿದೆ. ಈ ಮೊದಲು ಭಾರತ 9 ವಿಕೆಟಿಗೆ 388 ರನ್ ಪೇರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೂಲಕ ಭಾರತ 13 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಮೂರು ವಿಕೆಟಿಗೆ 153 ರನ್ನುಗಳಿಂದ ದಿನದಾಟ ಆರಂಭಿಸಿದ ಭಾರತ ತಂಡವನ್ನು ಸೌರಭ್ ಸಿಂಗ್ ಆಧರಿಸಿದರು. ಅವರು ಡ್ಯಾರಿಲ್ ಫೆರಾರಿಯೊ ಮತ್ತು ಸಿದ್ಧಾರ್ಥ್ ಅಕ್ರೆ ಜತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ರಿಂದ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಂತಾಯಿತು. 43 ರನ್ನಿನಿಂದ ದಿನದಾಟ ಮುಂದುವರಿಸಿದ ಸೌರಭ್ ಸಿಂಗ್ ಶತಕ ಸಿಡಿಸಿ ಸಂಭ್ರಮಿಸಿದರು. 292 ಎಸೆತ ಎದುರಿಸಿದ ಸೌರಭ್ 13 ಬೌಂಡರಿ ನೆರವಿನಿಂದ 109 ರನ್ ಹೊಡೆದರು. ಅವರು ಫೆರಾರಿಯೊ ಜತೆ ಐದನೇ ವಿಕೆಟಿಗೆ 97 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಫೆರಾರಿಯೊ 55 ರನ್ ಹೊಡೆದರೆ ಅಕ್ರೆ 54 ರನ್ ಗಳಿಸಿದರು.
13 ರನ್ ಮೊದಲ ಇನ್ನಿಂಗ್ಸ್ ಹಿನ್ನಡೆ ಸಾಧಿಸಿದ ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 34 ರನ್ ಗಳಿಸಿದೆ. ಇಂಗ್ಲೆಂಡ್ ಒಟ್ಟಾರೆ 21 ರನ್ ಮುನ್ನಡೆಯಲ್ಲಿದೆ. ಅಂತಿಮ ದಿನ ಇಂಗ್ಲೆಂಡ್ ದಿನಪೂರ್ತಿ ಆಡಿದರೆ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಹಠಾತ್ ಕುಸಿತ ಕಂಡು ಆಲೌಟಾದರೆ ಭಾರತ ಗೆಲುವಿಗಾಗಿ ಪ್ರಯತ್ನಿಸಬಹುದು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 375 ಮತ್ತು 2 ವಿಕೆಟಿಗೆ 34; ಭಾರತ 9 ವಿಕೆಟಿಗೆ 388 ಡಿಕ್ಲೇರ್x (ಅಭಿಷೇಕ್ ಗೋಸ್ವಾಮಿ 58, ಸೌರಭ್ ಸಿಂಗ್ 109, ಡ್ಯಾರಿಲ್ ಫೆರಾರಿಯೊ 55, ಸಿದ್ಧಾರ್ಥ್ ಅಕ್ರೆ 54, ಆರನ್ ಬಿಯರ್ಡ್ 56ಕ್ಕೆ 2, ಪ್ಯಾಟರ್ಸನ್ ವೈಟ್ 83ಕ್ಕೆ 2, ಯುವಾನ್ ವುಡ್ಸ್ 61ಕ್ಕೆ 2, ಮ್ಯಾಕ್ಸ್ ಹೋಲೆxನ್ 63ಕ್ಕೆ 2).