Advertisement

ಅಂಡರ್‌-19 ದ್ವಿತೀಯ ಟೆಸ್ಟ್‌: ಇಂಗ್ಲೆಂಡ್‌ 375 ಆಲೌಟ್‌

10:26 AM Feb 23, 2017 | Team Udayavani |

ನಾಗ್ಪುರ: ಭಾರತ ವಿರುದ್ಧ ನಡೆಯುತ್ತಿರುವ ಅಂಡರ್‌-19 ಯೂತ್‌ ಟೆಸ್ಟ್‌ ಸರಣಿಯ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್‌ ಅಂಡರ್‌-19 ತಂಡವು 375 ರನ್‌ ಗಳಿಸಿ ಆಲೌಟಾಗಿದೆ.
 
ಇದಕ್ಕುತ್ತರವಾಗಿ ಭಾರತ ಅಂಡರ್‌-19 ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡಿದ್ದು 153 ರನ್‌ ಗಳಿಸಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಭಾರತ ಇನ್ನೂ 222 ರನ್‌ ಗಳಿಸಬೇಕಾಗಿದೆ.

Advertisement

5 ವಿಕೆಟಿಗೆ 243 ರನ್ನುಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡವನ್ನು ಡೆಲಾÅಯ್‌ ರಾಲಿನ್ಸ್‌, ಜ್ಯಾಕ್ಸ್‌ ಮತ್ತು ಬ್ರೂಕ್ಸ್‌ ಆಧರಿಸಿದರು. ಈ ಮೂವರ ಉತ್ತಮ ಆಟದಿಂದಾಗಿ ತಂಡದ ಮೊತ್ತ 300ರ ಗಡಿ ದಾಟುವಂತಾಯಿತು. 124 ರನ್ನಿನಿಂದ ಆಟ ಮುಂದುವರಿಸಿದ ರಾಲಿನ್ಸ್‌ 140 ರನ್‌ ಗಳಿಸಿ ಔಟಾದರೆ ಜ್ಯಾಕ್ಸ್‌ 77 ಮತ್ತು ಬ್ರೂಕ್ಸ್‌ 60 ರನ್‌ ಹೊಡೆದರು.ಎಚ್ಚರಿಕೆಯ ಆಟವಾಡಿದ ಭಾರತದ ಆರಂಭಿಕರಾದ ಅಭಿಷೇಕ್‌ ಗೋಸ್ವಾಮಿ ಮತ್ತು ಉತ್ಕರ್ಷ್‌ ಸಿಂಗ್‌ ಮೊದಲ ವಿಕೆಟಿಗೆ 68 ರನ್‌ ಪೇರಿಸಿದರು. ಉತ್ಕರ್ಷ್‌ 19 ರನ್‌ ಗಳಿಸಿ ಔಟಾದರೆ ಗೋಸ್ವಾಮಿ 58 ರನ್‌ ಹೊಡೆ ದರು. ಸೌರಭ್‌ ಸಿಂಗ್‌ 43 ರನ್‌ ಗಳಿಸಿ ಆಡುತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next