Advertisement

ಅಂಡರ್‌-19 ಏಕದಿನ ಸರಣಿ: ಇಂಗ್ಲೆಂಡಿಗೆ ವೈಟ್‌ವಾಶ್‌

11:20 AM Aug 18, 2017 | |

ಟಾಂಟನ್‌: ಪೃಥ್ವಿ ಷಾ ನೇತೃತ್ವದ ಭಾರತದ ಅಂಡರ್‌-19 ಕ್ರಿಕೆಟ್‌ ತಂಡ ಆತಿಥೇಯ ಇಂಗ್ಲೆಂಡ್‌ ಅಂಡರ್‌-19 ವಿರುದ್ಧದ ಏಕದಿನ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಇದಕ್ಕೂ ಹಿಂದಿನ 2 ಟೆಸ್ಟ್‌ ಪಂದ್ಯಗಳನ್ನೂ ಭಾರತ ಗೆದ್ದಿತ್ತು. ಇದರೊಂದಿಗೆ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಪಳಗಿದ ಭಾರತ ತಂಡ ಕ್ರಿಕೆಟ್‌ ಜನಕರ ನಾಡಿನಲ್ಲಿ ಅಮೋಘ ಪಾರಮ್ಯ ಮೆರೆದಂತಾಯಿತು.

Advertisement

ಬುಧವಾರ ಟಾಂಟನ್‌ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯ ವನ್ನು ಭಾರತ ಒಂದು ವಿಕೆಟ್‌ ಅಂತರದಿಂದ ರೋಮಾಂಚ ಕಾರಿಯಾಗಿ ಜಯಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 9 ವಿಕೆಟಿಗೆ 222 ರನ್‌ ಗಳಿಸಿದರೆ, ಭಾರತ 49.2 ಓವರ್‌ಗಳಲ್ಲಿ 9 ವಿಕೆಟಿಗೆ 226 ರನ್‌ ಬಾರಿಸಿ ವಿಜಯಿಯಾಯಿತು. ಆಗ ಕೆ.ಎಲ್‌. ನಾಗರಕೋಟಿ 26 ರನ್‌ ಮಾಡಿ ಅಜೇಯರಾಗಿದ್ದರು. ಪೃಥ್ವಿ ಶಾ ಸರ್ವಾಧಿಕ 52, ಕೀಪರ್‌ ಹಾರ್ವಿಕ್‌ ದೇಸಾಯಿ 44, ಎಸ್‌. ರಾಧಾಕೃಷ್ಣನ್‌ 30 ರನ್‌ ಮಾಡಿದರು.

ಇಂಗ್ಲೆಂಡ್‌ ಪರ 49 ರನ್‌ ಮಾಡಿದ ನಾಯಕ ಹ್ಯಾರಿ ಬ್ರೂಕ್‌ ಅವರದೇ ಹೆಚ್ಚಿನ ಗಳಿಕೆ. ಲೆಗ್‌ಸ್ಪಿನ್ನರ್‌ ರಾಹುಲ್‌ ಚಹರ್‌ 63ಕ್ಕೆ 4, ಅಭಿಷೇಕ್‌ ಶರ್ಮ 33ಕ್ಕೆ 3 ವಿಕೆಟ್‌ ಕಿತ್ತರು. ಮೊದಲ 4 ಏಕದಿನ ಪಂದ್ಯ ಗಳನ್ನು ಭಾರತ 5 ವಿಕೆಟ್‌, 8 ವಿಕೆಟ್‌, 169 ರನ್‌ ಹಾಗೂ ಒಂದು ರನ್ನಿನಿಂದ ಗೆದ್ದಿತ್ತು. ಟೆಸ್ಟ್‌ ಪಂದ್ಯಗಳಲ್ಲಿ ಗೆಲುವಿನ ಅಂತರ 334 ರನ್‌ ಹಾಗೂ 97 ರನ್‌.

Advertisement

Udayavani is now on Telegram. Click here to join our channel and stay updated with the latest news.

Next