Advertisement

ಅಂಡರ್‌-19: ಕೊನೆಯಲ್ಲಿ ಎಡವಿದ ಭಾರತ

10:52 PM Dec 30, 2019 | Team Udayavani |

ಈಸ್ಟ್‌ ಲಂಡನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಅಂಡರ್‌-19 ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸೋಲನುಭವಿಸಿದೆ. ಹರಿಣಗಳ ಪಡೆ ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟಿಗೆ 192 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದರೆ, ದಕ್ಷಿಣ ಆಫ್ರಿಕಾ 48.2 ಓವರ್‌ಗಳಲ್ಲಿ 5 ವಿಕೆಟಿಗೆ 193 ರನ್‌ ಬಾರಿಸಿತು. ಭಾರತದ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಪ್ರಿಯಂ ಗರ್ಗ್‌ 52 ರನ್‌ ಮಾಡಿ ನಾಯಕನ ಆಟವಾಡಿದರೆ, ಉಳಿದವರು ಆತಿಥೇಯರ ದಾಳಿಗೆ ತತ್ತರಿಸಿ ವಿಕೆಟ್‌ ಒಪ್ಪಿಸುತ್ತ ಹೋದರು. ಇಪ್ಪತ್ತರ ಗಡಿ ದಾಟಿದ ಉಳಿದಿಬ್ಬರೆಂದರೆ ತಿಲಕ್‌ ವರ್ಮ (25) ಮತ್ತು ಧ್ರುವ್‌ ಜುರೆಲ್‌ (22). ಚೇಸಿಂಗ್‌ ವೇಳೆ ವನ್‌ಡೌನ್‌ ಬ್ಯಾಟ್ಸ್‌ಮನ್‌ ಜೊನಾಥನ್‌ ಬರ್ಡ್‌ ಅಜೇಯ 88 ರನ್‌ ಬಾರಿಸಿ ಭಾರತಕ್ಕೆ ಸವಾಲಾಗಿ ಉಳಿದರು.

Advertisement

Udayavani is now on Telegram. Click here to join our channel and stay updated with the latest news.

Next