ಜೊಹಾನ್ಸ್‌ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ಅಂಡರ್-19 ತಂಡಗಳ ನಡುವೆ ಬುಧವಾರ ಇಲ್ಲಿ ನಡೆಯಬೇಕಿದ್ದ ಟಿ20 ತ್ರಿಕೋನ ಸರಣಿಯ ಫೈನಲ್ ಪಂದ್ಯ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಪಂದ್ಯಕ್ಕೆ ಮೀಸಲು ದಿನ ಇಲ್ಲದ ಕಾರಣ ಎರಡೂ ತಂಡಗಳಿಗೆ ಪ್ರಶಸ್ತಿಯನ್ನು ಹಂಚಲಾಯಿತು.
ಮಳೆ ನಿಂತ ಬಳಿಕ ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲು ಸಂಘಟಕರು ಪ್ರಯತ್ನಿಸಿದರು. ಆದರೆ ಒದ್ದೆ ಅಂಗಳದಿಂದಾಗಿ ಇದನ್ನು ಕೈಬಿಡಲಾಯಿತು. ಟಾಸ್ ಕೂಡ ಹಾರಿಸಲಾಗಲಿಲ್ಲ.
ಉದಯ್ ಸಹಾರಣ್ ನಾಯಕತ್ವದ ಭಾರತ ನಾಲ್ಕೂ ಲೀಗ್ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. 2 ಸಲ ದಕ್ಷಿಣ ಆಫ್ರಿಕಾವನ್ನು ಕೆಡವಿತ್ತು.
ಭಾರತ ತಂಡವಿನ್ನು ಜ. 19ರಂದು ಆರಂಭವಾಗಲಿರುವ ಅಂಡರ್-19 ವಿಶ್ವಕಪ್ ಪಂದ್ಯಾವಳಿಯತ್ತ ಗಮನ ಹರಿಸಲಿದೆ. ಶನಿವಾರ ಪ್ರಿಟೋರಿಯಾದಲ್ಲಿ ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ಮುಖಾಮುಖೀ ಆಗಲಿವೆ.