Advertisement
ಹಾಲಿ ಚಾಂಪಿಯನ್, ಅತ್ಯಧಿಕ 5 ಸಲ ಕಪ್ ಎತ್ತಿರುವ, ಈ ಕೂಟದ ಐದೂ ಪಂದ್ಯಗಳನ್ನು ಗೆದ್ದಿರುವ ಭಾರತ ಖಂಡಿತವಾಗಿಯೂ ಉಪಾಂತ್ಯದ ನೆಚ್ಚಿನ ತಂಡ. ಆದರೆ ದಕ್ಷಿಣ ಆಫ್ರಿಕಾ ಆತಿ ಥೇಯ ತಂಡವಾಗಿರುವ ಕಾರಣ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಭಾರತ ಲೀಗ್ ಹಂತದ 3 ಹಾಗೂ ಸೂಪರ್ ಸಿಕ್ಸ್ ವಿಭಾಗದ ಎರಡೂ ಪಂದ್ಯಗಳನ್ನು ಅಧಿಕಾರಯುತವಾಗಿ ಜಯಿಸಿತ್ತು. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದೆ.
ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದೆ. 2 ಶತಕ ಹಾಗೂ ಒಂದು ಅರ್ಧ ಶತಕ ಹೊಡೆದಿರುವ ಮುಶೀರ್ ಖಾನ್ ಕಿರಿಯರ ತಂಡದ ರನ್‌ಯಂತ್ರವಾಗಿ ಮಾರ್ಪಟ್ಟಿದ್ದಾರೆ. 334 ರನ್ ಗಳಿಸಿದ ಹೆಗ್ಗಳಿಕೆ ಇವರದು. ನಾಯಕ ಉದಯ್ ಸಹಾರಣ್ ಕೂಡ ಸೆಂಚುರಿ ಬಾರಿಸಿದ್ದಾರೆ. ಜತೆಗೆ 2 ಅರ್ಧ ಶತಕ ಸೇರಿದೆ. 304 ರನ್ ಬಾರಿಸಿದ ಹಿರಿಮೆ ಇವರದು. ನೇಪಾಲ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯದಲ್ಲಿ 116 ರನ್ ಬಾರಿಸಿದ ಸಚಿನ್ ದಾಸ್ ಕೂಡ ಬ್ಯಾಟಿಂಗ್ ಸರದಿಯ ಬೆನ್ನೆಲುಬಾಗಿದ್ದಾರೆ.
Related Articles
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
Advertisement