ಹೊಸದಿಲ್ಲಿ: ಯುಎಇ ಯಲ್ಲಿ ಡಿ. 8ರಿಂದ 17ರ ತನಕ ನಡೆ ಯಲಿರುವ ಅಂಡರ್-19 ಏಕದಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪಂಜಾಬ್‌ನ ಉದಯ್ ಸಹಾರಣ್ ಮುನ್ನಡೆಸಲಿದ್ದಾರೆ.
ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ, ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮುಶೀರ್ ಖಾನ್ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸಿ.ಕೆ. ನಾಯ್ಡು ಟ್ರೋಫಿ ಪಂದ್ಯಾವಳಿಯಲ್ಲಿ ತ್ರಿಶತಕ ಬಾರಿಸಿದ ಹಿರಿಮೆ ಇವರದಾಗಿದೆ. ಮುಶೀರ್ ಅಂಡರ್-19 ತಂಡಕ್ಕೆ ಆಯ್ಕೆಯಾದ ಮುಂಬಯಿಯ ಏಕೈಕ ಆಟಗಾರ. ಮೂವರು ಸ್ಟಾಂಡ್‌ಬೈ ಆಟ ಗಾರರು ತಂಡದೊಂದಿಗೆ ಯುಎಇಗೆ ತೆರಳಲಿದ್ದಾರೆ. ನಾಲ್ವರು ಮೀಸಲು ಕ್ರಿಕೆಟಿಗರನ್ನೂ ಹೆಸರಿಸಲಾಗಿದೆ.
ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಅಫ್ಘಾನಿಸ್ಥಾನ (ಡಿ. 8), ಪಾಕಿಸ್ಥಾನ (ಡಿ. 10) ಮತ್ತು ನೇಪಾಲ (ಡಿ. 12) ವಿರುದ್ಧ ಆಡಲಿದೆ.
“ಬಿ’ ವಿಭಾಗದ ತಂಡಗಳೆಂದರೆ ಬಾಂಗ್ಲಾದೇಶ, ಜಪಾನ್, ಶ್ರೀಲಂಕಾ, ಯುಎಇ. ಡಿ. 15ರಂದು ಸೆಮಿಫೈನಲ್ಸ್, 17ರಂದು ಫೈನಲ್ ನಡೆಯಲಿದೆ.
ಭಾರತ ತಂಡ: ಉದಯ್ ಸಹಾರಣ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೋಲಿಯ, ಮುಶೀರ್ ಖಾನ್, ಎ. ಅವಿನಾಶ್ ರಾವ್, ಸೌಮ್ಯಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್, ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಸ್ಟಾಂಡ್‌ಬೈ ಆಟಗಾರರು: ಪ್ರೇಮ್ ದೇವ್ಕರ್, ಅಂಶ್ ಗೋಸಾಯಿ, ಅಮಾನ್. ಮೀಸಲು ಕ್ರಿಕೆಟಿಗರು: ದಿಗ್ವಿಜಯ್ ಪಾಟೀಲ್, ಜಯಂತ್ ಗೋಯತ್, ಪಿ. ವಿಘ್ನೇಶ್, ಕಿರಣ್ ಸಿ.