Advertisement

Under-19 ಏಷ್ಯಾ ಕಪ್‌ : ಭಾರತವನ್ನು ಮಣಿಸಿದ ಪಾಕ್‌

11:02 PM Dec 10, 2023 | Team Udayavani |

ದುಬಾೖ: ಅಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ “ಎ’ ವಿಭಾಗದ ರವಿವಾರದ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಭಾರತ 8 ವಿಕೆಟ್‌ಗಳ ಆಘಾತ ಅನುಭವಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 9 ವಿಕೆಟಿಗೆ 259 ರನ್‌ ಗಳಿಸಿದರೆ, ಪಾಕಿಸ್ಥಾನ 47 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 263 ರನ್‌ ಬಾರಿಸಿತು.ವನ್‌ಡೌನ್‌ ಬ್ಯಾಟರ್‌ ಆಜಾನ್‌ ಅವೈಸ್‌ ಅಜೇಯ 105 ರನ್‌ ಬಾರಿಸಿದರು. ಆರಂಭಕಾರ ಶಾಜೇಬ್‌ ಖಾನ್‌ 63 ಮತ್ತು ನಾಯಕ ಸಾದ್‌ ಬೇಗ್‌ ಔಟಾಗದೆ 68 ರನ್‌ ಹೊಡೆದು ಸುಲಭ ಜಯ ತಂದಿತ್ತರು.

ಭಾರತದ ಸರದಿಯಲ್ಲಿ ಆರಂಭಕಾರ ಆದರ್ಶ್‌ ಸಿಂಗ್‌ (62), ನಾಯಕ ಉದಯ್‌ ಸಹಾರಣ್‌ (60) ಮತ್ತು ಸಚಿನ್‌ ದಾಸ್‌ 58) ಅರ್ಧ ಶತಕ ಬಾರಿಸಿದರು.

ಭಾರತ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿತ್ತು. ಮಂಗಳವಾರ ನೇಪಾಲವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next